ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: 'ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗೆ ಅರ್ಥ'

ಸಿರವಾರ : ಮಾನವ ಪ್ರೀತಿ, ಸಕಲ ಜೀವಿಗಳ ಲೇಸು, ಮಾನವೀಯ ಅನುಕಂಪ, ದ್ವೇಷರಹಿತ ಮತ್ತು ಅಸಮಾನತೆ ರಹಿತ ಸಮಾಜ ನಿರ್ಮಾಣದ ಕನಸುಗಳು ಪ್ರತಿ ಶ್ಲೋಕದಲ್ಲೂ ಬುಗ್ಗೆಯಾಗಿವೆ ಎಂದು ಯುವ ಮುಖಂಡ ಎನ್.ಉದಯಕುಮಾರ ಹೇಳಿದ್ದಾರೆ.

ವಾಲ್ಮೀಕಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಸುಮದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಉದಯಕುಮಾರ ಇಂದು ಜಗತ್ತು ಎದುರಿಸುತ್ತಿರುವ ಬಹುತೇಕ ತಲ್ಲಣಗಳಿಗೆ, ಈ ಆದರ್ಶಗಳಲ್ಲಿ ಸಮರ್ಪಕ ಉತ್ತರವಿದೆ. ಇವು ಆ ನೋವಿಗೆ ಮುಲಾಮು ಆಗಬಲ್ಲವು ಎನ್ನುವುದನ್ನು ಇಂದು ‘ವಾಲ್ಮೀಕಿ ಜಯಂತಿ’ ಆಚರಣೆಗೆ ನಿಂತವರು ಮನಗಾಣಬೇಕಿದೆ. ಅನೇಕ ಮಹನಿಯರ ಜಯಂತಿಯನ್ನು ಆಚರಣೆ ಮಾಡುತ್ತೆವೆ, ಆದರೆ ಅವರು ಜಗ್ಗತಿಗೆ ಸಾರಿ ಹೋಗಿರುವ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳುತ್ತಿಲ್ಲ. ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗೆ ಅರ್ಥ ಬರುತ್ತದೆ ಎಂದರು.

Edited By : Vijay Kumar
PublicNext

PublicNext

10/10/2022 07:29 am

Cinque Terre

18.15 K

Cinque Terre

0