ರಾಯಚೂರು: ನಾಡಿನೆಲ್ಲೆಡೆ ಆಯುಧ ಪೂಜೆ ಬಲು ಜೋರಾಗಿ ನಡೆಯುತ್ತಿದೆ. ಆಯುಧ ಪೂಜೆ ಪ್ರಯುಕ್ತ ಅಲಂಕಾರಕ್ಕಾಗಿ ಬಾಳೇ ಗಿಡ, ಚೆಂಡು ಹೂವಿನ ಸಸಿ ಖರೀದಿಯಲ್ಲಿ ಗ್ರಾಹಕರು ಮಗ್ನರಾಗಿದ್ರೆ ಇತ್ತ ವ್ಯಾಪಾರಸ್ಥರು ಬೆಲೆಯಿಲ್ಲದೆ ಚಿಂತೆಗೀಡಾಗಿದ್ದಾರೆ.
ಹೌದು ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಚೆಂಡು ಹೂವಿನ ಸಸಿಗಳು, ಮತ್ತು ಚೆಂಡು ಹೂವು ಕೊಳೆತು ಹೋಗಿರುವುದರಿಂದ ಗ್ರಾಹಕರು ತೀರಾ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ. ಇನ್ನೂ ಬಾಳೆ ಗಿಡಗಳು ಗಾಳಿಗೆ ಎಲೆಗಳು ಹರಿದ ಕಾರಣ ಅದರ ಬೆಲೆಯಲ್ಲಿ ಏರಿಳಿತವಾಗಿದೆ. ಕಳೆದ ಹಬ್ಬಗಳಿಗೆ ಹೋಲಿಸಿದರೆ 100 ರಿಂದ 150 ರೂಪಾಯಿಗೆ ಜೊತೆ ಕೊಡಲಾಗುತ್ತಿತ್ತು. ಆದರೆ ಈ ಬಾರಿ ಗ್ರಾಹಕರು 50 ರಿಂದ 80 ರೂ. ಮಾತ್ರ ನೀಡುತ್ತಿದ್ದಾರೆ. ಇದರಿಂದ ವ್ಯಾಪಾರವಿದ್ದರೂ ಸಹ ಬೆಲೆ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಗೋಳಾಡುತ್ತಿದ್ದಾರೆ.
PublicNext
04/10/2022 03:57 pm