ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕೈಗೆ ಬಂದ ಬೆಳೆ ನೀರುಪಾಲು; ಪರಿಹಾರಕ್ಕಾಗಿ ಅಂಗಲಾಚುತ್ತಿರೋ ಅನ್ನದಾತ

ಅಥಣಿ: ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ಕಷ್ಟಪಟ್ಟು ಉತ್ತಿ ಬೆಳೆದ ರೈತ ಸುರಿದ ಮಳೆರಾಯನನ್ನು ಶಪಿಸುತ್ತಾ ಕುಳಿತಿದ್ದಾರೆ.

ಅಥಣಿ ತಾಲೂಕಿನ ಗಡಿ ಗ್ರಾಮಗಳಾದ ಕೊಕಟನೂರ, ಸುಟ್ಟಟ್ಟಿ, ಶಿರಹಟ್ಟಿ, ಬಡವಾಡ, ಅರಟಾಳ, ಬಾಡಗಿ, ದೇಸಾಯಿರಟ್ಟಿ ಹಾಗೂ ಸಂಬರಗಿ, ಕಲೂತಿ, ನಾಗನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಗೆ, ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿ ಅವಾಂತರವನ್ನೇ ಸೃಷ್ಟಿಸಿದೆ. ಮಳೆಯಿಂದ ನೀರು ಹೊಲದಲ್ಲಿ ನಿಂತು ಉದ್ದಿನ ಬೇಳೆ ಫಸಲು ಹೊಲದಲ್ಲಿಯೇ ಕೊಳೆತು ರೈತರು ಕಂಗಾಲಾಗಿದ್ದಾರೆ.

ನಮಗೆ ರಕ್ಷಣೆ ನೀಡುವ ಜನಪ್ರತಿನಿಧಿಗಳ ಮೌನ ಒಂದೆಡೆಯಾದರೆ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಇದುವರೆಗೂ ಪರಿಹಾರ ದೊರೆತಿಲ್ಲ ಎಂದು ಹಲವು ಗ್ರಾಮದ ರೈತರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಅದ್ರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ಈಗ ನಮಗೆ ಉದ್ಭವವಾಗಿದೆ, ಮನ ಕೇಳದೆ ಅಳಿದುಳಿದ ಬೆಳೆಯನ್ನು ನೀರಿನಿಂದ ಸಾಧ್ಯವಾದಷ್ಟು ರಕ್ಷಣೆ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

Edited By :
PublicNext

PublicNext

03/09/2022 07:15 pm

Cinque Terre

51.91 K

Cinque Terre

0