ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರೈತರೊಬ್ಬರಿಗೆ ರಸಗೊಬ್ಬರ ದೋಖಾ..!

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ರೈತ ದಾನಪ್ಪ ಮಲಾಬಾದ ಎಂಬುವರು ಖರೀದಿಸಿರುವ ರಸಗೊಬ್ಬರ ನಕಲಿ ಗೊಬ್ಬರವಾಗಿದ್ದು ಅವರಿಗೆ ಮೋಸವಾಗಿದೆ ಎಂದು ಆರೋಪಿಸುತ್ತಿದ್ದಾರೆ.

ತಾಲೂಕಿನ ವಿವಿಧೆಡೆ ರಸಗೊಬ್ಬರ ಖರೀದಿಗೆ ಪ್ರಯತ್ನಪಟ್ಟು ಸಿಗದೇ ಇದ್ದಾಗ ಸುಟ್ಟಟ್ಟಿ ಗ್ರಾಮದ ರೈತ ದಾನಪ್ಪ ಮಲಾಬಾದ ಪಕ್ಕದ ಜಿಲ್ಲೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದ ಪಿಕೆಪಿಎಸ್ ಭೇಟಿಕೊಟ್ಟು ಅವರಿಂದ 600 ರೂಪಾಯಿಯಂತೆ 50 ಕೆಜಿಯ ಎರಡು ರಸಗೊಬ್ಬರವನ್ನು ಪರಿಶೀಲನೆ ಮಾಡದೆ ಮನೆಗೆ ತಂದಿದ್ದಾರೆ.

ಬಳಿಕ ಆ ರಸಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ಹಾಕಬೇಕೆಂದು ಹೊತ್ತೊಯ್ದು ನೋಡಿದಾಗ ಅದರಲ್ಲಿ ರಸಗೊಬ್ಬರಕ್ಕಿಂತ ಮಣ್ಣು, ಕಲ್ಲುಗಳೇ ಹೆಚ್ಚಿದ್ದವು. ಇದು ಅವರನ್ನು ಕಂಗಾಲಾಗಿಸಿದ್ದು, ಕೂಡಲೇ ಮಾಧ್ಯಮಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಈ ವಂಚನೆಯಿಂದ ಸಾಕಷ್ಟು ನಷ್ಟವಾಗಿ. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮವಾಗಲಿ, ನಕಲಿ ರಸಗೊಬ್ಬರ ಹಾವಳಿ ಹಿಂದಿನಿಂದಲೂ ಇದೆ. ಇನ್ನು ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ ವಿರುದ್ಧ ಸರ್ಕಾರ ಮತ್ತು ಕೃಷಿ ಸಚಿವರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Edited By :
PublicNext

PublicNext

19/08/2022 08:12 pm

Cinque Terre

75.02 K

Cinque Terre

1