ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನಾನು ಹಿಂದೂ ದೇವರು, ದೇವತೆಗಳನ್ನು ಪೂಜಿಸುವುದಿಲ್ಲ ಎಂದು ರಾಜೇಂದ್ರ ಪಾಲ್ ಗೌತಮ್ ಶಪಥ ಮಾಡುವ ಮೂಲಕ ಭಾರಿ ವಿವಾದಕ್ಕೆ ಗುರಿಯಾಗಿದ್ದರು. ಈ ವಿಚಾರವಾಗಿ ಬಿಜೆಪಿ ಮುಖಂಡರು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೆ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಮಧ್ಯೆ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಇಂದು ಮಹರ್ಷಿ ವಾಲ್ಮೀಕಿ ಅವರ ದ್ಯೋತಕ ದಿನ. ಮತ್ತೊಂದೆಡೆ ಇದು ಮಾನ್ಯವರ್ ಕಾನ್ಶಿ ರಾಮ್ ಸಾಹೇಬ್ ಅವರ ಪುಣ್ಯತಿಥಿ. ಇದು ಕಾಕತಾಳೀಯವೋ ಏನು. ಇಂದು ನಾನು ಅನೇಕ ಸಂಕೋಲೆಗಳಿಂದ ಬಿಡುಗಡೆ ಹೊಂದಿದ್ದೇನೆ. ಇಂದು ನಾನು ಮತ್ತೆ ಹುಟ್ಟಿದ್ದೇನೆ. ಈಗ ನಾನು ಯಾವುದೇ ನಿರ್ಬಂಧವಿಲ್ಲದೆ ಹೆಚ್ಚು ದೃಢವಾಗಿ ಸಮಾಜದ ಮೇಲಿನ ಹಕ್ಕುಗಳು ಮತ್ತು ದೌರ್ಜನ್ಯಗಳ ಹೋರಾಟವನ್ನು ಮುಂದುವರಿಸುತ್ತೇನೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.
PublicNext
10/10/2022 12:15 pm