ಬೆಂಗಳೂರು: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ನಾಯಕರನ್ನು ಟ್ವೀಟ್ ಮೂಲಕ ಕುಟುಕಿದೆ.
ಹೊನ್ನಾವರದ ಪರೇಶ್ ಮೇಸ್ತಾ ಅಸಹಜ ಸಾವು ಪ್ರಕರಣವು ಸಿಬಿಐ ತನಿಖೆಯಲ್ಲಿ ಅದು ಕೊಲೆಯಲ್ಲ, ಬದಲಾಗಿ ಆಕಸ್ಮಿಕ ಸಾವು ಎಂಬುದು ಗೊತ್ತಾಗಿದೆ. ಈ ಬಗ್ಗೆ ಸಿಬಿಐ ಹೊನ್ನಾವರದ ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿದೆ. ಇದೇ ರೀತಿ ಡಿ.ಕೆ ರವಿ ಪ್ರಕರಣ–ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ–ಸರ್ಕಾರಕ್ಕೆ ಸಂಬಂಧವಿಲ್ಲ, ಪರೇಶ್ ಮೇಸ್ತಾ ಪ್ರಕರಣ – ಸಹಜ ಸಾವು ಸುಳ್ಳು ಹೇಳಿದ್ದ ರಾಜ್ಯ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
PublicNext
04/10/2022 04:01 pm