ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ್ ಜೋಡೋ ಯಾತ್ರೆ ಪ್ರಚಾರ ಫಲಕದಲ್ಲಿ ಸಾವರ್ಕರ್ ಚಿತ್ರ; ವಿಡಿಯೋ ವೈರಲ್ ಕಾಂಗ್ರೆಸ್ ಗೆ ಮುಜುಗರ

ಕೊಚ್ಚಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆರಂಭಿಸಿದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದರ ಮಧ್ಯೆ ಇಂದು ಕೇರಳದಲ್ಲಿ ಯಡವಟ್ಟೊಂದು ನಡೆದಿದೆ.ಹೌದು ಕೇರಳದಲ್ಲಿದೆ. ನೆಡುಂಬಶ್ಶೇರಿಯ ಕೊಟ್ಟಾಯಿ ಜಂಕ್ಷನ್ ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸ್ವಾಗತ ಕೋರಿ ಕಾಂಗ್ರೆಸ್ ಪಕ್ಷ ಬ್ಯಾನರ್ ಸ್ಥಾಪಿಸಿತ್ತು. ಈ ಬ್ಯಾನರ್ ನಲ್ಲಿ ಸಾವರ್ಕರ್ ಚಿತ್ರವಿದ್ದು, ಫೋಟೊ ವೈರಲ್ ಆದ ಬೆನ್ನಲ್ಲೇ ಈ ಚಿತ್ರವನ್ನು ಬದಲಿಸಲಾಗಿದೆ.

ಕೇರಳದ ಶಾಸಕ ಪಿವಿ ಅನ್ವರ್ ಈ ಬ್ಯಾನರ್ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಬಂದು ಸಾವರ್ಕರ್ ಅವರ ಚಿತ್ರದ ಮೇಲೆ ಗಾಂಧೀಜಿಯವರ ಚಿತ್ರವನ್ನು ಅಂಟಿಸಿ ಮುಜುಗರ ತಪ್ಪಿಸುವ ಕೆಲಸ ಮಾಡಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಆಗಮಿಸುವ ಮುನ್ನ ಸಾವರ್ಕರ್ ಫೋಟೊವನ್ನು ಮರೆ ಮಾಡಲಾಗಿದ್ದರೂ, ಅದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಸದ್ಯ ಪ್ರಚಾರ ಫಲಕದಲ್ಲಿ ಸಾವರ್ಕರ್ ಅವರ ಚಿತ್ರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎನ್ ಟಿಯುಸಿ ಚೆಂಗಮನಾಡ್ ಕ್ಷೇತ್ರದ ಅಧ್ಯಕ್ಷ ಸುರೇಶ್ ಅವರನ್ನು ಅಮಾನತುಗೊಳಿಸಲಾಗಿದೆ. ಕೊಟ್ಟಾಯಿ ಜಂಕ್ಷನ್ ನಲ್ಲಿ ಹಾಕಿರುವ ಬೋರ್ಡ್ ವಿವಾದವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Edited By : Nirmala Aralikatti
PublicNext

PublicNext

21/09/2022 06:45 pm

Cinque Terre

132.36 K

Cinque Terre

31

ಸಂಬಂಧಿತ ಸುದ್ದಿ