ತುಮಕೂರು: ದೊಡ್ಡಬಳ್ಳಾಪುರ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೃದಯಾಘಾತದಿಂದ ಮೃತಪಟ್ಟ ತುಮಕೂರು ತಾಲೂಕು ಕೋರ ಹೋಬಳಿ ಹಿರೇತೊಟ್ಲುಕೆರೆ ಗ್ರಾಮದ ಸಿದ್ದಲಿಂಗಯ್ಯ ಮನೆಗೆ ಬಿಜೆಪಿ ಮುಖಂಡರು ಭೇಟಿ ಸಾಂತ್ವಾನ ಹೇಳುವ ಜೊತೆಗೆ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಸಚಿವ ಸೊಗಡು ಶಿವಣ್ಣ,ಸಂಸದ ಬಸವರಾಜು,ತುಮಕೂರುನಗರ ಶಾಸಕ ಜಿ ಬಿ ಜ್ಯೋತಿಗಣೇಶ್,ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ ಕೆ ಮಂಜುನಾಥ್,ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಕೊರಟಗೆರೆ ಬಿಜೆಪಿ ಮಂಡಲಾಧ್ಯಕ್ಷ ಪವನ್ ಕುಮಾರ್, ಕೊರಟಗೆರೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಅನಿಲ್ ಕುಮಾರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಬಿಜೆಪಿ ರಾಜ್ಯ ಘಟಕದಿಂದ ಮೃತರ ಕುಟುಂಬಕ್ಕೆ ಒಂದು ಲಕ್ಷ ರೂ ಪರಿಹಾರ ವಿತರಿಸಲಾಗಿದೆ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ ಕೆ ಮಂಜುನಾಥ್, ಕೊರಟಗೆರೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್, ಕೊರಟಗೆರೆ ಬಿಜೆಪಿ ಮಂಡಲಾಧ್ಯಕ್ಷ ಪವನ್ ಕುಮಾರ್ ತಲಾ 10000 ಕೋರ ಹೋಬಳಿ ಬಿಜೆಪಿ ಘಟಕದಿಂದ 5000 ಹಾಗೂ ಮುನಿಯಪ್ಪ ಆರ್ಥಿಕ ಸಹಾಯ ಮಾಡಿದ್ದಾರೆ.
ಈ ವೇಳೆ ಕೋರ ಹೋಬಳಿ ಬಿಜೆಪಿ ಅಧ್ಯಕ್ಷ ರಾಜೇಂದ್ರಕುಮಾರ್, ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಶ್ರೀಧರ್, ತಾಲ್ಲೂಕು ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಿರೇಗುಂಡಗಲ್ ಲೋಕೇಶ್, ಬಿಜೆಪಿ ಮುಖಂಡ ಹಿರೇತೊಟ್ಲುಕೆರೆ ವಿಶ್ವನಾಥ್ ಸ್ತಳೀಯ ಬಿಜೆಪಿ ಮುಖಂಡರು ಉಪಸ್ತಿತರಿದ್ದರು.
PublicNext
12/09/2022 05:05 pm