ಪಾಟ್ನಾ: ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಇಂದು ಬುಧವಾರ ಬಿಹಾರ ಸಿಎಂ ನಿತೀಶ್‌ಕುಮಾರ್ ಹಾಗೂ ಡಿಸಿಎಂ ತೇಜಸ್ವಿ ಯಾದವ್ ಅವರನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಅವರು ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಅವರ ಮನೆಗೆ ತೆರಳಿ ಕೆಲ ಹೊತ್ತು ಚರ್ಚಿಸಿದ್ದಾರೆ.
ಬಿಹಾರದ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳೆಂದರೆ ಆರ್‌ಜೆಡಿ ಮತ್ತು ಜೆಡಿಯು. ಈ ಎರಡೂ ಪಕ್ಷಗಳ ನಾಯಕರನ್ನು ಕೆ. ಚಂದ್ರಶೇಖರ ರಾವ್ ಒಂದೇ ದಿನ ಭೇಟಿಯಾಗಿದ್ದು ರಾಜಕೀಯ ಕುತೂಹಲ ಮೂಡಿಸಿದೆ. ಅವರು ಇತ್ತೀಚೆಗೆ ಬಿಜೆಪಿ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದರು. ಚಂದ್ರಶೇಖರ್ ರಾವ್ ಕೂಡ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕರು. ಹೀಗಾಗಿ ದೇಶದ ಮುಂಚೂಣಿ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಇರಾದೆ ಕೆಸಿಆರ್ ಅವರಿಗೆ ಇದೆ ಎಂಬ ರಾಜಕೀಯ ಚರ್ಚೆ ನಡೆಯುತ್ತಿದೆ.
PublicNext
31/08/2022 11:03 pm