ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈಶ್ವರಪ್ಪ ಒಬ್ಬ ಕಚಡಾ ನನ್ಮಗ: ಇಮ್ರಾನ್ ಪಾಷಾ ವಾಗ್ದಾಳಿ

ಬೆಂಗಳೂರು: ಈಶ್ವರಪ್ಪ ಒಬ್ಬ ಕಚಡಾ ನನ್ಮಗ ಎಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಅವರು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಬೆಂಬಲ ನೀಡುವ, ಅಪ್ಪಟ ಅಭಿಮಾನಿಯಾಗಿರುವ ಹಾಗೂ ಮಂತ್ರಿ ಸೀಟ್‌ ಕೊಡಿಸಲು ಹೋರಾಡುವ ಬೆಂಬಲಿಗನಿಗೆ ಕೆ.ಎಸ್‌.ಈಶ್ವರಪ್ಪ ನಾಲ್ವತ್ತು ಪರ್ಸೆಂಟ್ ಕಮಿಷನ್‌ಗಾಗಿ ಕಿರುಕುಳ ಕೊಟ್ಟರು. ಪರಿಣಾಮ ಆತ ಆತ್ಮಹತ್ಯೆಗೆ ಶರಣಾದ. ಹೀಗಿದ್ದರೂ ಹಿಂದೂ ಸಹೋದರರು ಆತನಿಗೆ ಬೆಂಬಲ ನೀಡುತ್ತಾರೆ ಎಂದು ಕಿಡಿಕಾರಿದರು.

ಶಿವಮೊಗ್ಗ ಸೇರಿದಂತೆ ವಿವಿಧ ಘಟನೆಯಲ್ಲಿ ಅಮಾಯಕ ಹಿಂದೂಗಳು ಸಾವನ್ನಪ್ಪಿದರು. ಆಗ ನಡೆದ ಪ್ರತಿಭಟನೆಯಲ್ಲಿ ಯಾವುದೇ ಬಿಜೆಪಿ ಶಾಸಕ, ಸಚಿವರ ಮಕ್ಕಳು ಪ್ರತಿಭಟನೆಗೆ ಇಳಿದು ಮಸೀದಿ, ಜನರ ಮೇಲೆ ಕಲ್ಲು ಎಸೆಯಲಿಲ್ಲ. ತಾವು ಸುರಕ್ಷಿತವಾಗಿದ್ದು, ಅಮಾಯಕರನ್ನು ಇಂತಹ ಕೃತ್ಯಕ್ಕೆ ಬಳಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.

Edited By : Vijay Kumar
PublicNext

PublicNext

30/08/2022 03:40 pm

Cinque Terre

34.77 K

Cinque Terre

35

ಸಂಬಂಧಿತ ಸುದ್ದಿ