ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಹೇಮಂತ್ ಸೋರೆನ್ ಶಾಸಕ ಸ್ಥಾನ ರದ್ದು

ನವದೆಹಲಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರ ವಿಧಾನಸಭೆಯ ಸದಸ್ಯತ್ವ ರದ್ದಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ದೋಷಿ ಎಂದು ಪರಿಗಣಿಸಿರುವ ಚುನಾವಣಾ ಆಯೋಗವು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ.

ರಾಜ್ಯಪಾಲರು ಅನರ್ಹತೆಯ ಆದೇಶವನ್ನು ಗೆಜೆಟ್ ನಲ್ಲಿ ಸೂಚಿಸಿದ ನಂತರ, ಹೇಮಂತ್ ಸೊರೆನ್ ರಾಜೀನಾಮೆ ನೀಡಬೇಕಾಗುತ್ತದೆ. ಅವರ ಜೊತೆ ಅವರ ಮಂತ್ರಿಮಂಡಲವೂ ರಾಜೀನಾಮೆ ನೀಡಲಿದೆ. ಆದರೆ, ಆರು ತಿಂಗಳೊಳಗೆ ಚುನಾವಣಾ ಆಯೋಗ ನಡೆಸುವ ಉಪಚುನಾವಣೆಯಲ್ಲಿ ಅವರು ಮರು ಆಯ್ಕೆಯಾಗಬಹುದು.

ಜಾರ್ಖಂಡ್ ಮುಕ್ತಿ ಮೋರ್ಚಾದಿಂದ ಶಾಸಕರಾಗಿದ್ದ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

Edited By : Nirmala Aralikatti
PublicNext

PublicNext

26/08/2022 10:56 pm

Cinque Terre

70.83 K

Cinque Terre

10

ಸಂಬಂಧಿತ ಸುದ್ದಿ