ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನೋದು ಭಂಡತನ; ಬಿ.ವೈ.ವಿಜಯೇಂದ್ರ ಕಿಡಿ

ಗದಗ: ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನೋದು ಭಂಡತನ ಎಂದು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲಕ್ಷ್ಮೇಶ್ವರ ಸಮೀಪದ ಮುಕ್ತಿಮಂದಿರ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ನಮ್ಮ ನಾಡಿಗೆ ಒಂದು ಸಂಸ್ಕೃತಿ, ಪರಂಪರೆ ಇದೆ, ಧಾರ್ಮಿಕ ಶ್ರದ್ಧೆ ಇದೆ. ಇದೆಲ್ಲವನ್ನೂ ನಂಬಿ ಜೀವನ‌ ಸಾಗಿಸುವ ಅಪಾರ‌ ಜನರು, ಭಕ್ತರು ಇದ್ದಾರೆ. ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದರಿಂದ ಇತರರ ಮನಸ್ಸಿಗೆ ಘಾಸಿ ಆಗುತ್ತದೆ. ನಮ್ಮ ನಡುವಳಿಕೆ ಇತರರಿಗೆ ಮಾದರಿಯಾಗಬೇಕು' ಎಂದರು.

ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದೇ ಬಿಟ್ಟಿದೇವೆ ಅನ್ನೋ ಅತಿಯಾದ ಆತ್ಮವಿಶ್ವಾಸದಲ್ಲಿ ಮುನ್ನುಗ್ಗುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ಸಿಕ್ಕಿದ್ದು ಕಾಂಗ್ರೆಸ್‌ಗೆ ಆಘಾತ ನೀಡಿದೆ. ವಿಜಯದ ನಾಗಾಲೋಟಕ್ಕೆ ಯಡಿಯೂರಪ್ಪ ಅಡ್ಡಿಯಾಗ್ತಾರಲ್ಲ ಅಂತ ಮಾಜಿ ಹಾಗೂ ಭಾವಿ ಮುಖ್ಯಮಂತ್ರಿ ಅಭ್ಯರ್ಥಿಗಳ ಕನಸಿಗೆ‌ ಭಂಗ ಆಗಿದೆ. ಸೋಲಿನ ಭಯಕ್ಕೆ ಸಹಜವಾಗಿ ಮಠ, ದೇವಸ್ಥಾನಕ್ಕೆ ಹೋಗ್ತಿದ್ದಾರೆ. ಆದರೆ ಅಲ್ಲಿಗೆ ಹೋದಾಗ ಯಾವ ರೀತಿ ನಡೆದುಕೊಳ್ತಾರೆ ಅನ್ನೋದು ಬಹಳ ಮುಖ್ಯ, ರಾಜ್ಯದ ಜನ ಇದೆಲ್ಕವನ್ನೂ ಗಮನಿಸ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆಯೂ ಕಾಂಗ್ರೆಸ್ ನಾಯಕರು ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದರು. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದು ಗೊತ್ತಾದ ತಕ್ಷಣ ಜಾತಿ ವಿಷ ಬೀಜ ಬಿತ್ತಲು ಶುರು ಮಾಡುತ್ತಾರೆ. ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಗಳು, ಹಿರಿಯ ನಾಯಕರೇ ಈ ಕೆಲಸ ಮಾಡಿದರು. ಆದರೆ ಅದು ಯಶಸ್ವಿಯಾಗಿ ಆಗಲಿಲ್ಲ‌ ಎಂದರು.

ಸಾವರ್ಕರ್ ಭಾವಚಿತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, 'ವೀರ ಸಾವರ್ಕರ್ ಅವರನ್ನು ರಸ್ತೆ ಮೇಲೆ ತಂದು ಅವಮಾನ ಮಾಡುತ್ತಿದ್ದಾರೆ. ಇದು ಯಾರಿಗೂ ಶೋಭೆ ತರುವಂಥದ್ದಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅವಹೇಳನಕಾರಿ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ. ವಿಜಯದ ನಾಗಾಲೋಟದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿಗೆ ಬಿಜೆಪಿಯಲ್ಲಾದ ರಾಜಕೀಯ ಬೆಳವಣಿಯಿಂದ ಹಿನ್ನೆಡೆಯಾಗಿದೆ' ಎಂದರು.

Edited By : Shivu K
PublicNext

PublicNext

22/08/2022 02:32 pm

Cinque Terre

68.62 K

Cinque Terre

8

ಸಂಬಂಧಿತ ಸುದ್ದಿ