ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಸುಮ್ಮನೇ ಕೂರೋದಿಲ್ಲ, ರಾಜ್ಯದಲ್ಲಿ ಬೆಂಕಿ ಹಚ್ತೀವಿ: ಸಿಡಿದೆದ್ದ ಸಿದ್ದರಾಮಯ್ಯ

ಕೊಡಗು: ನೆರೆ ಪೀಡಿತ ಪ್ರದೇಶಗಳ ಸಂಕಷ್ಟ ಕೇಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಗುರುವಾರ ಜಿಲ್ಲ ಪ್ರವಾಸ ಹಮ್ಮಿಕೊಂಡಿದ್ದರು. ಈ ವೇಳೆ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಮಡಿಕೇರಿಯ ಜನರಲ್ ಕೆ.ಎಸ್ ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದಾರೆ.

ಈ ಘಟನೆ ಖಂಡಿಸಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಸಿದ್ದರಾಮಯ್ಯ ಸರಕಾರದ ಮೇಲೆ ಕೆಂಡಾಮಂಡಲರಾಗಿದ್ದಾರೆ. 'ಪ್ರತಿಭಟನಾಕಾರರನ್ನು ಒದ್ದು ಒಳಗೆ ಹಾಕಲು ಆಗೋದಿಲ್ವಾ? ನೀವೇನು ಆರ್‌ಎಸ್‌ಎಸ್ ಗೂಂಡಾಗಳೊಂದಿಗೆ ಶಾಮೀಲಾಗಿದ್ದೀರಾ? ಅವರನ್ನೆಲ್ಲ ಪ್ರತಿಭಟನೆಗೆ ಬಿಟ್ಟು ತಮಾಷೆ ನೋಡ್ತಿದ್ದೀರಾ? ಇದನೆಲ್ಲ ನೋಡಿ ನಾವೇನು ಸುಮ್ಮನೇ ಕೂರಲ್ಲ. ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ. ಆಗಸ್ಟ್ 26ಕ್ಕೆ ಕೊಡಗು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಅದೇ ದಿನ ಮಡಿಕೇರಿಗೆ ಬರಲಿದ್ದೇ‌ನೆ' ಎಂದು ಸಿದ್ದರಾಮಯ್ಯ ಅಸಮಾಧಾನಿತರಾಗಿದ್ದಾರೆ.

Edited By : Nagaraj Tulugeri
PublicNext

PublicNext

18/08/2022 11:03 pm

Cinque Terre

41.39 K

Cinque Terre

48

ಸಂಬಂಧಿತ ಸುದ್ದಿ