ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೃಣಮೂಲ ಕಾಂಗ್ರೆಸ್ ಮುಗಿಸಲು ಇಡಿ, ಸಿಬಿಐ ಸಜ್ಜಾಗುತ್ತಿವೆ : ಸುವೇಂದು ಅಧಿಕಾರಿ

ಕೊಲ್ಕತಾ : ಟಿಎಂಸಿ ಇನ್ನೂ ಆರು ತಿಂಗಳವರೆಗೂ ಆಡಳಿತ ನಡೆಸಲ್ಲ, ಡಿಸೆಂಬರ್ ಅವರ ಡೆಡ್ ಲೈನ್ ಆಗಿದೆ ಎಂದು ಅಧಿಕಾರಿ ಪೂರ್ವ ಮಿಡ್ನಾಪುರದಲ್ಲಿ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಮುಂದಿನ ಆರು ತಿಂಗಳಲ್ಲಿ ಹೊಸ ಮತ್ತು ಸುಧಾರಿತ ಟಿಎಂಸಿ ಬರಲಿದೆ ಎಂಬ ಟಿಎಂಸಿ ಹೇಳಿಕೆಯ ಫೋಸ್ಟರ್ ಕುರಿತು ಪ್ರತಿಕ್ರಿಯಿಸಿರುವ ಸುವೇಂದು, ಇಡಿ ಮತ್ತು ಸಿಬಿಐ ತನ್ನ ಕೆಲಸವನ್ನು ಮಾಡುತ್ತಿವೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮುಖಂಡರ ಮೇಲಿನ ಇತ್ತೀಚಿನ ಇಡಿ ದಾಳಿಯನ್ನು ಅವರು ಉಲ್ಲೇಖಿಸಿದರು. ಮಮತಾ ಬ್ಯಾನರ್ಜಿ ಅವರ ಆಪ್ತರಾದ ಅನುಬ್ರಾತಾ ಮಂಡಲ್ ಅವರನ್ನು ಆಗಸ್ಟ್ 20ರವರೆಗೂ ಸಿಬಿಐ ಕಸ್ಟಡಿಗೆ ಕಳುಹಿಸಲಾಗಿದೆ. ಎಸ್ ಎಸ್ ಸಿ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಆತನ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು ಇಡಿ ಇಂದಿನವರೆಗೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

18/08/2022 06:50 pm

Cinque Terre

28.68 K

Cinque Terre

1

ಸಂಬಂಧಿತ ಸುದ್ದಿ