ದಾವಣಗೆರೆ: ಜನ ನನಗೆ ಬೈಯ್ತಾರ್ರೀ.. ಸಗಣಿ ತಿನ್ನೋರು ಇವ್ರು. ಸುಮ್ಮನೆ ನಮ್ಮನ್ನು ಸೇರಿಸಿ ಹೇಳುತ್ತಾರೆ. ಕೆಳಗಿನಿಂದ ಮೇಲೆ ಹೋಗುತ್ತಂತೆ. ಮಾಮೂಲಿ ಅಂತಾ ಹೇಳ್ತಾರಂತೆ ಅಯೋಗ್ಯರು ಇವ್ರೆಲ್ಲಾ. ಹೀಗೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಕರೆ ಮಾಡಿ ತಾಂತ್ರಿಕ ಸಹಾಯಕರ ವಿರುದ್ಧ ಸುರಿಮಳೆಗೈದ ದೂರಿನ ತುಣುಕು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ತಾಂತ್ರಿಕ ಸಹಾಯಕರ ವಿರುದ್ಧ ರೈತರು ಹಣ ಪಡೆಯುತ್ತಾರೆ ಎಂದು ಶಾಸಕ ಎಂ. ಪಿ. ರೇಣುಕಾಚಾರ್ಯರ ಗಮನಕ್ಕೆ ತಂದರು. ಈ ವೇಳೆ ಆಕ್ರೋಶಗೊಂಡ ರೇಣುಕಾಚಾರ್ಯ ಇ.ಒ. ಕೃಷಿ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳ ಮುಂದೆಯೇ ತರಾಟೆಗೆ ತೆಗೆದುಕೊಂಡರು.
ಸಿಇಒ ಅವರಿಗೆ ಕರೆ ಮಾಡಿ ತಿನ್ನೋದು ಇವರು, ನಮಗೆ ಕೆಟ್ಟ ಹೆಸರು. ನಾವು ರೈತರು ಹಾಗೂ ಅಡಿಕೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ಕೀಂ ಮಾಡಿಸಲು ತುಂಬಾನೇ ಕಷ್ಟಪಟ್ಟಿದ್ದೇವೆ. ಎಷ್ಟು ಹೊಡೆಯುತ್ತಾರೆ ಲೂಟಿ. ಇವ್ರೆಲ್ಲಾ ಕಳ್ಳರು. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆರು ಜನ ಇದ್ದು, ಎಲ್ಲರ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ನಮ್ಮ ಮಾನ, ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ದುಡ್ಡು ಕೊಟ್ಟರೆ ಮೂರು ವರ್ಷದ ಸಸಿಗೂ ಪರಿಹಾರ ನೀಡುತ್ತಾರೆ. ಆರು ತಿಂಗಳ ಸಸಿಗೆ ನೀಡೋದಿಲ್ವಂತೆ. ಎಲ್ಲರನ್ನೂ ಕೂಡಲೇ ಕೆಲಸದಿಂದ ತೆಗೆದು ಹಾಕಿ.
ಸಂಬಂಧಪಟ್ಟ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೂ ಈ ವಿಚಾರ ಸಂಬಂಧ ಮಾತನಾಡುತ್ತೇನೆ. ಕೆಳಗಿನಿಂದ ಮೇಲೆ ಹೋಗುತ್ತೆ ಅಂತೀರಲ್ಲಾ, ಯಾರಿಗೆ ಕೊಡುತ್ತೀರಾ ಮಾಮೂಲು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
PublicNext
16/08/2022 06:40 pm