ನವದೆಹಲಿ: ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನ ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಶುಭ ದಿನದಂದು ವಿಶ್ವದ ಹಲವು ದೇಶಗಳಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಾಡುತ್ತಿದೆ. ನಮ್ಮ ದೇಶದ ಅಗಣಿತ ಜನರು ಯಾತನೆ ಅನುಭವಿಸಿ ಆಹುತಿ ಮಾಡಿಕೊಂಡಿದ್ದರಿಂದ ನಮಗೆ ಸ್ವಾತಂತ್ರ್ಯ ಲಭಿಸಿತು. ಎಲ್ಲ ತ್ಯಾಗಿಗಳನ್ನು ನಾವು ಸ್ಮರಿಸಬೇಕು.
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವುದು. ದೇಶದ ಮುನ್ನಡೆಯ ಕನಸು ಬಿತ್ತಿದ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ ಸಾವರ್ಕರ್ಗೆ ಅವರಿಗೆ ನಾವು ಕೃತಜ್ಞರು. ಮಂಗಲ್ ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ತಮ್ಮ ಸರ್ವಸ್ವವನ್ನೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ರಾಣಿ ಲಕ್ಷ್ಮೀಬಾಯಿ, ದುರ್ಗಾಬಾಭಿ, ರಾಣಿ ಚೆನ್ನಮ್ಮ ಸೇರಿದಂತೆ ಹಲವು ಹೋರಾಟಗಾರ್ತಿಯರು ಭಾರತದ ಶಕ್ತಿ ಏನೆಂದು ತೋರಿಸಿದ್ದಾರೆ ಎಂದು ಮೋದಿ ನೆನೆದರು.
ನಾರಾಯಣ ಗುರು, ಸ್ವಾಮಿ ವಿವೇಕಾನಂದ, ಮಹರ್ಷಿ ಅರವಿಂದ, ಗುರುದೇವ್ ರವೀಂದ್ರ ನಾಥ್ ಠಾಗೋರ್ ಸೇರಿದಂತೆ ಹಲವು ಮಹಾಪುರುಷರು ದೇಶದ ಮೂಲೆಮೂಲೆಗಳಲ್ಲಿ ದೇಶಭಕ್ತಿ ಬಿತ್ತಿದರು. ಅಮೃತ ಮಹೋತ್ಸವದ ಮೂಲಕ ನಾವು ಇವರೆಲ್ಲರನ್ನೂ ಗೌರವಿಸಬೇಕು. ಅಮೃತ ಮಹೋತ್ಸವ ಪ್ರಯುಕ್ತ ವಿಶಾಲ ಭಾರತದ ಮೂಲೆಮೂಲೆಗಳಲ್ಲಿ ನಮ್ಮ ಮಹಾಪುರುಷರನ್ನು ಸ್ಮರಿಸಿ ಗೌರವಿಸಿದ್ದೇವೆ. ಇದು ಮಹತ್ವದ ವಿದ್ಯಮಾನ ಎಂದು ಮೋದಿ ಹೇಳಿದರು.
PublicNext
15/08/2022 07:58 am