ತುಮಕೂರು : ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ,ಅವರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ ಎಂದು ಶಾಸಕ ಡಿ ಸಿ ಗೌರೀಶಂಕರ್ ಹರಿಹಾಯ್ದರು.
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ಕೋಡಿ ಬಿದ್ದಿರುವ ಅರಕೆರೆ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ನೆರೆದಿದ್ದ 3000 ಹೆಣ್ಣು ಮಕ್ಕಳಿಗೆ ಸೀರೆ ಬಾಗಿನ ವಿತರಿಸಿ ಮಾತನಾಡಿದರು.
ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರಣಿ ಸಭೆಗಳನ್ನು ಮಾಡಿ ಅಧಿಕಾರಿಗಳಿಗೆ ಛಾಟಿ ಬೀಸುತ್ತಿದ್ದರು. ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಸಭೆ ನಡೆಸುತ್ತಿದ್ದರು,ಆದರೆ ಈಗಿರುವ ಉಸ್ತುವಾರಿ ಸಚಿವರನ್ನು ನೋಡೇ ಇಲ್ಲ,ಅವರು ಒಂದು ಸಭೆಯನ್ನು ಮಾಡಿಲ್ಲ, ಅವರು ಜಿಲ್ಲಾ ಉಸ್ತುವಾರಿ ಸಚಿವ ಬಳಿಕ ಹಿರೇಹಳ್ಳಿ ಬಳಿ ರೈತ ಮಹಿಳೆಯ ಅತ್ಯಾಚಾರವಾಯಿತು,ಆದರೆ ಆ ಪ್ರಕರಣವನ್ನು ಇಲ್ಲಿವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
PublicNext
09/08/2022 05:54 pm