ಪಾಟ್ನಾ: ಭಾರತೀಯ ಜನತಾ ಪಾರ್ಟಿ ಹಾಗೂ ಜನತಾ ದಳ ನಡುವಿನ ಮೈತ್ರಿ ಅಂತ್ಯವಾಗಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಹಲವು ದಿನಗಳಿಂದಲೂ ರಾಜಕೀಯ ಊಹಾಪುಗಳು ಇದ್ದೇ ಇವೆ. ಆದರೆ, ಇಂದು ಅದಕ್ಕೆ ಸಿಎಂ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ.
ಇಂದು ಪಕ್ಷದ ಶಾಸಕರು,ಸಂಸದರು ಹಾಗೂ ಮುಖಂಡರ ಜೊತೆಗೆ ನಡೆದ ಸಭೆಯಲ್ಲಿ ನಿತೀಶ್ ಕುಮಾರ್ ಈ ಘೋಷಣೆ ಮಾಡಿದ್ದಾರೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.
ರಾಜ್ಯಪಾಲರನ್ನ ಭೇಟಿಯಾಗಲು ಇಂದು ಸಂಜೆ 4 ಗಂಟೆಗೆ ಸಿಎಂ ನಿತೀಶ್ ಕುಮಾರ್ ಸಮಯ ನಿಗದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
PublicNext
09/08/2022 02:35 pm