ಕನಕಪುರ :ಮಾಜಿ ಯೋಧನಿಗೆ ದೇಶಾಭಿಮಾನಿಗಳ ಗೌರವ
ಕನಕಪುರ : ಭಾರತೀಯ ಸೇನೆಯಲ್ಲಿ ೨೪ ವರ್ಷಗಳ ಕಾಲ ಸೇವೆಗೈದು ನಿವೃತ್ತರಾಗಿ ಆಗಮಿಸಿದ ಸೈನಿಕ ಸಿ.ಆನಂದ್ ಕುಮಾರ್ ರವರನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.
ತಾಲ್ಲೂಕಿನ ಬಿ ಎಸ್ ದೊಡ್ಡಿ ಗ್ರಾಮದವರಾದ ಸಿ ಅನಂತ್ ಕುಮಾರ್ ಇಪ್ಪತ್ತನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ತನ್ನೂರಿಗೆ ಸೋಮವಾರ ಮರಳಿದರು. ಈ ಸಮಯದಲ್ಲಿ ಭವ್ಯ ಮೆರವಣಿಗೆ ಮುಖಾಂತರ ಕರವೇ ಕನ್ನಡ ಪರ ಸಂಘಟನೆಗಳು ಹಾಗೂ ದೇಶಾಭಿಮಾನಿಗಳು ಹೃದಯಪೂರ್ವಕವಾಗಿ ಸ್ವಾಗತಿಸಿದರು.
ನಗರಕ್ಕೆ ಆಗಮಿಸಿದ ಯೋಧನನ್ನು ಜೈಹೋ ಜೈಹೋ ಎಂದು ದೇಶದ ಮನೆಗಳು ಘೋಷಣೆಗಳನ್ನು ಕೂಗಿ ಪುಷ್ಪ ಮಳೆಗರೆದು ಆರ್ ಎಸ್ ಮೈದಾನದಿಂದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
PublicNext
08/08/2022 07:20 pm