ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಯಿಂದ ಹತ್ಯೆಗಳ ಸಂಖ್ಯೆ ಏರಿಕೆ !

ದೆಹಲಿ: ಅತ್ಯಾಚಾರಿಗಳಿಗೆ ಮರಣದಂಡನೆ ಕಾನೂನು ಜಾರಿ ಆದ್ಮೇಲೆ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರ ಹತ್ಯೆ ಹೆಚ್ಚಾಗುತ್ತಿವೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹಲೋತ್ ಹೇಳಿಕೊಟ್ಟಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಈ ರೀತಿ ಹೇಳಿಕೆ ಕೊಡೋ ಮೂಲಕ ಹೊಸ ವಿವಾದವನ್ನೇ ಸೃಷ್ಟಿಸಿದ್ದಾರೆ. ನಿರ್ಭಯಾ ಪ್ರಕರಣ ಆದ್ಮೇಲೆ ಮರಣದಂಡನೆ ಕಾನೂನು ಜಾರಿಗೆ ಬಂತು. ಆ ಬಳಿಕವೇ ಸಂತ್ರಸ್ತೆಯ ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಅಂತಲೇ ಅಶೋಕ್ ಗೆಹಲೋತ್ ವಿವರಿಸಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗದ ಸಂತ್ರಸ್ತೆ ಎಲ್ಲಿ ತನ್ನ ಮೇಲೆ ಸಾಕ್ಷಿ ಹೇಳುತ್ತಾಳೋ ಅಂತಲೇ ಆಯಾ ಅತ್ಯಾಚಾರಿಗಳು ಸಂತ್ರಸ್ತೆಯನ್ನ ಕೊಂದು ಹಾಕುತ್ತಿದ್ದಾರೆ. ಇಂತಹ ಘಟನೆಗಳು ದೇಶದಲ್ಲಿ ತುಂಬಾ ನಡೆಯುತ್ತಿವೆ. ಇದು ನಿಜಕ್ಕೂ ಅಪಾಯಕಾರಿ ಅಂತಲೇ ಅಶೋಕ್ ಗೆಹಲೋತ್ ಆತಂಕ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

08/08/2022 08:00 am

Cinque Terre

26.87 K

Cinque Terre

4

ಸಂಬಂಧಿತ ಸುದ್ದಿ