ಗದಗ: ಡಾವಣಗೆರೆಯಲ್ಲಿ ನಡೆದ ಸಿದ್ಧರಾಮಯ್ಯ ಸಮಾವೇಶ ಸ್ಟೀರಾಯ್ಡ್ ಇದ್ದಂತೆ.ಸ್ಟೀರಾಯ್ಡ್ ಶಕ್ತಿ ಬಹಳ ಹೊತ್ತು ಇರೋದಿಲ್ಲ, ಸ್ವಲ್ಪ ಟೈಮ್ ಇರುತ್ತೆ. ೮ ತಿಂಗಳ ವರೆಗೆ ಈ ಸ್ಟೀರಾಯ್ಡ್ ಶಕ್ತಿ ನಿಲ್ಲೋಲ್ಲ ಎಂದು ಗದಗನಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ ಸಿದ್ದರಾಮೋತ್ಸವದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಗರದ ನೀರಿಕ್ಷಣಾ ಮಂದಿರದಲ್ಲಿ ಈ ಪತ್ರಿಕಾ ಗೋಷ್ಠಿ ವೇಳೆ ಈ ಕುರಿತು ಮಾತನಾಡಿದ ಅವರು, ದೇಶದ ಪ್ರಧಾನಿ ಸ್ವಾತಂತ್ರ್ಯದ ಬಗ್ಗೆ ನಾಡಿನ ಜನತೆಯನ್ನ ಬಡಿದೆಬ್ಬಿಸಿದ್ರೆ, ಇತ್ತ ಇನ್ನೊಬ್ಬರು ಹುಟ್ಟು ಹಬ್ಬಕ್ಕೆ ಬಡಿದಾಡ್ತಿದ್ದಾರೆ. ರಾಹುಲ್ ಗಾಂಧಿ ಆಲಿಂಗನ ಮಾಡಿಸಿದ್ರಲ್ಲಾ ಇದೇನಾ ಒಗ್ಗಟ್ಟು? ಇದು ಎಷ್ಟರ ಮಟ್ಟಿಗೆ ಒಗ್ಗಟ್ಟಿದೆ ಎಂದು ತೋರಿಸಿದ್ರಲ್ಲಾ? ಎಂದು ಪ್ರಶ್ನಿಸಿದರು. ಒಂದು ಸಮಾವೇಶ ಮಾಡಿ ಖುಷಿ ಪಟ್ಟಿರಬಹುದು. ಆದರೆ ಬಿಜೆಪಿಗೆ ಇಂತಹ ಸಮಾವೇಶಗಳು ದಿನನಿತ್ಯ ಇರುತ್ತವೆ. ಇನ್ನೂ ಯಾವ ಯಾವ ಉತ್ಸವ ಆಗ್ತವೆ ನೋಡೋಣ ಎಂದು ಹೇಳಿದ್ರು. ಇನ್ನು ಸಿದ್ಧರಾಮಯ್ಯ ವಿರುದ್ಧ ಕಿಡಿಕಾರಿದ ಪಾಟೀಲ, ಆರ್.ಎಸ್.ಎಸ್ ಹಾಗೂ ನರೇಂದ್ರ ಮೋದಿಯನ್ನು ಬೈಯದಿದ್ರೆ ಸಿದ್ದರಾಮಯ್ಯಗೆ ಊಂಡ ಊಟ ಅರಗೋದಿಲ್ಲ.
ಒಂದು ಉತ್ಸವ ಮಾಡಿ ಇಷ್ಟೊಂದು ಹಾರಾಡ್ತಾರೆ.ನಾವು ನಿತ್ಯ ಉತ್ಸವ, ಹೋರಾಟ ಮಾಡ್ತೆವಿ, ಇನ್ನು ನಾವೇಷ್ಟು ಹಾರಾಡಬಹುದು ಎಂದು ಹೇಳಿದ ಸಿ.ಸಿ.ಪಾಟೀಲ, ಯಾವುದೇ ಸಂಘಟನೆ, ಹುಟ್ಟು ಹಬ್ಬಕ್ಕೆ ಬಿಜೆಪಿ ಹೆದರೋದಿಲ್ಲ. ಹುಟ್ಟುಹಬ್ಬ ನೋಡಿ ಜನ ಮತ ಹಾಕೋದಿಲ್ಲ ಎಂದು ಗದಗನಲ್ಲಿ ಸಚಿವ ಸಿಸಿ ಪಾಟೀಲ್ ಹೇಳಿಕೆ ನೀಡಿದ್ರು.
PublicNext
07/08/2022 07:15 pm