ಬೆಂಗಳೂರು: ಮೂಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆನ್ನಲ್ಲೇ ಪ್ರತ್ಯೇಕ ಕಾಯ್ದೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿರುವ ಬಿಡಿಎ ಮಾದರಿಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತ್ಯೇಕ ಕಾಯ್ದೆ ರೂಪಿಸಲು ಸಂಪುಟ ಒಪ್ಪಿಗೆ ನೀಡಿದೆ.
ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ - 2024 ಕ್ಕೆ ಅನುಮೋದನೆ ನೀಡಿದೆ. ಮುಂದಿನ ವಾರ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ. ಇದೂವರೆಗೂ ಮುಡಾ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರದ ಅಧೀನದಲ್ಲಿತ್ತು.ನಗರಾಭಿವೃದ್ಧಿ ಕಾಯ್ದೆ 1987ರ ಅನ್ವಯ ಕಾರ್ಯನಿರ್ವಹಿಸುತ್ತಿದ್ದ ಮುಡಾ.ಈಗ ಬಿಡಿಎ ಮಾದರಿಯಲ್ಲೇ ಮೂಡಾಕ್ಕೆ ಪ್ರತ್ಯೇಕ ಕಾಯ್ದೆಗೆ ಸಂಪುಟ ಅಸ್ತು ಎಂದಿದೆ.ಹೊಸ ಕಾಯ್ದೆ ಪ್ರಕಾರವೇ ಮುಂದೆ ಭೂಸ್ವಾಧೀನ, ನಿವೇಶನ ಹಂಚಿಕೆ, ನಕ್ಷೆ ಮಂಜೂರಾತಿ ಪ್ರಕ್ರಿಯೆಗಳು ನಡೆಯಲಿದೆ.ಈ ಮೊದಲು ಹೆಚ್ಚು ರಾಜಕೀಯ ನಾಯಕರೇ ಮುಡಾ ಸದಸ್ಯರಾಗಿ ಇದ್ದರು ಆದ್ರೆ ಈ ವಿಧೇಯಕದಲ್ಲಿ 3-4 ರಾಜಕೀಯ ನಾಯಕರಿಗೆ ಮಾತ್ರ ಸದಸ್ಯರಾಗಲು ಅವಕಾಶವಿದೆ. ಬಹುತೇಕ ಅಧಿಕಾರಿ ವರ್ಗಕ್ಕೆ ಹೆಚ್ಚು ಅವಕಾಶ ಕಲ್ಪಿಸಲಾಗುತ್ತೆ. ಬಿಡಿಎ ಮಾದರಿಯಲ್ಲಿ ಬೋರ್ಡ್‌ನಲ್ಲಿರುತ್ತಾರೆ ಅಧಿಕಾರಿಗಳು. ಬಿಡಿಎಗೆ ಸ್ವಷ್ಟವಾದ ಕಾನೂನು ಇದೆ, ಅದೇ ಮಾದರಿಯಲ್ಲೇ ಕಾನೂನು ರೂಪಿಸಲು ಕ್ಯಾಬಿನೆಟ್ ಅಸ್ತು ಎಂದಿದೆ.
ಬೆಂಗಳೂರಿನಲ್ಲಿರುವ BDA ಮಾದರಿಯಲ್ಲೇ ಮೈಸೂರಿನಲ್ಲಿ MDA ( Mysore development authority) ತರುವ ಮೂಲಕ ತವರು ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭರ್ಜರಿ ಗಿಫ್ಟ್ ನೀಡುತ್ತಿದ್ದಾರೆ. ಬೆಂಗಳೂರು ಬಳಿಕ 40 ವರ್ಷಗಳ ನಂತರ ಮತ್ತೊಂದು ಜಿಲ್ಲೆಗೆ ವಿಶೇಷ ಅಭಿವೃದ್ಧಿ ಪ್ರಾಧಿಕಾರ ಮಾಡಲು ಹೊರಟಿದೆ ರಾಜ್ಯ ಸರ್ಕಾರ.ಬೆಂಗಳೂರಿಗೆ ಮಾತ್ರ ಇದ್ದ ವಿಶೇಷ ಅಭಿವೃದ್ಧಿ ಪ್ರಾಧಿಕಾರ ಈಗ ಮೈಸೂರಿಗೆ ನೀಡಲು ರಾಜ್ಯ ಸರ್ಕಾರ ಸಜ್ಜಾಗಿದೆ.
PublicNext
14/12/2024 12:28 pm