ಹೈದರಾಬಾದ್: ರಾತ್ರೋರಾತ್ರಿ ಚಿನ್ನದಂಗಡಿ ಮಾಲೀಕನ ಮನೆಗೆ ನುಗ್ಗಿದ ದರೋಡೆಕೋರರು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿದ್ದಾರೆ.
ಹೈದರಾಬಾದ್‌ನ ಡೋಮಲ್‌ಗುಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಂಜಿತ್ ಎಂಬ ಚಿನ್ನದ ವ್ಯಾಪಾರಿ ಮನೆಗೆ ನುಗ್ಗಿದ ಹತ್ತು ಜನ ದರೋಡೆಕೋರರು ಮೊದಲು ಕದ ತಟ್ಟಿದ್ದಾರೆ. ಕದ ತಟ್ಟುವಾಗ ಮನೆಯ ಸಂಬಂಧಿಯೊಬ್ಬರ ಹೆಸರು ಕೂಗಿದ್ದಾರೆ. ಬಾಗಿಲು ತೆಗೆದ ಕೂಡಲೇ ಎಲ್ಲರನ್ನೂ ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ನಂತರ ಮನೆಯಲ್ಲಿದ್ದ ಎರಡು ಕೆ.ಜಿ ಚಿನ್ನ, ಮೂರು ಮೊಬೈಲ್ ಫೋನ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ದರೋಡೆಕೋರರು ಮನೆಗೆ ನುಗ್ಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
14/12/2024 02:02 pm