ವರದಿ : ರವಿ ಕುಮಾರ್, ಕೋಲಾರ.
ಕೋಲಾರ: ನಾನು ಅಕಸ್ಮಾತಾಗಿ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರೆ ಸಾಯೋವರೆಗೂ ನೀವೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡುತ್ತಲೇ ಇರಬೇಕು. ಏಕೆಂದರೆ ನಾನು ಬ್ರಾಹ್ಮಣ. ನಾನು ಏನು ಹಲ್ಕಾ ಕೆಲಸ ಮಾಡಿದರೂ ನೀವು ನನಗೆ ಬಗ್ಗಿ ನಮಸ್ಕಾರ ಮಾಡಬೇಕು. ಆದರೆ ಸಂವಿಧಾನ ಇದನ್ನು ಬೇಡ ಅಂತ ಹೇಳುತ್ತದೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಮೇಶ್ ಕುಮಾರ್ ಈ ರೀತಿ ಭಾಷಣ ಮಾಡಿದ್ದಾರೆ, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗಿದ್ದರು.
ಬಿಜೆಪಿಯ ಹೃದಯವಾದ ಆರ್‌ಎಸ್‌ಎಸ್‌ನ ಸಿದ್ಧಾಂತ ಚಾತುರ್ವರ್ಣ ಪದ್ಧತಿ ಮನಸ್ಮೃತಿ. ಅಂದರೆ ಜಾತಿಯ ಶ್ರೇಷ್ಠತೆ ಬಗ್ಗೆ ಹೇಳುತ್ತೆ. ಯಾರು ಯಾವ ಜಾತಿ ಎಂದು ಜನ್ಮದಿಂದ ನಿರ್ಧಾರವಾಗುತ್ತದೆ. ಯಾರು ಯಾವ ಜಾತಿಯಲ್ಲಿ ಹುಟ್ಟುತ್ತಾರೋ ಅವರ ಬೇರೆ ಜಾತಿಗೆ ಹೋಗುವ ಹಾಗಿಲ್ಲ. ನಾನು ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರೆ ಸಾಯೋವರೆಗೂ ನೀವೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡುತ್ತಲೇ ಇರಬೇಕು. ನಾನು ಏನು ಹಲ್ಕಾ ಕೆಲಸ ಮಾಡಿದರೂ ನೀವು ನನಗೆ ಬಗ್ಗಿ ನಮಸ್ಕಾರ ಮಾಡಬೇಕು. ಆದರೆ ಇದು ಬೇಡ ಅಂತ ಸಂವಿಧಾನ ಹೇಳಿದೆ ಎಂದು ರಮೇಶ್ ಕುಮಾರ್ ಹೇಳಿದರು.
PublicNext
07/08/2022 01:44 pm