ವರದಿ : ರವಿ ಕುಮಾರ್, ಕೋಲಾರ.
ಕೋಲಾರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕುರಿತು ಕೋಲಾರದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮೋತ್ಸವಕ್ಕೆ ಯಾರೆಲ್ಲಾ ಏನೆಲ್ಲಾ ಮಾಡಿದ್ರು ನಮ್ಮ ಬಳಿ ಮಾಹಿತಿ ಇದೆ. ಯಾರು ಎಷ್ಟು ಖರ್ಚು ಮಾಡಿದ್ರು, ಎಷ್ಟು ಬಸ್ ಕಳುಹಿಸಿದ್ರು ಮಾಹಿತಿ ಇದೆ. ಕುಮಾರಸ್ವಾಮಿ ಅವರ ನೈಸ್ ರಸ್ತೆ ಉದ್ಘಾಟನೆ ಮಾಡಿ ಜನ ಸೇರಿಸಿದಾಗ 125 ಸೀಟು ಬರುತ್ತೆ ಎಂದಿದ್ರು. ಮೈದಾನದಲ್ಲಿ ಜನರು ಬಂದು ಜನ ಸೇರಿಸಿದ ಮಾತ್ರಕ್ಕೆ ಸರ್ಕಾರ ಬರಲ್ಲ ಎಂದರು.
ಹರ್ ಘರ್ ತಿರಂಗ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಮುನಿರತ್ನ, ಪ್ರತಿಯೊಬ್ಬರೂ ರಾಷ್ಟ್ರು ಧ್ವಜದ ಬಗ್ಗೆ ಗೌರ ಇಟ್ಟುಕೊಳ್ಳಬೇಕು. ರಾಷ್ಟ್ರ ಧ್ವಜವನ್ನು ಪ್ರತಿಯೊಬ್ಬರ ಮನೆ ಹಾಕುವುದು ತಪ್ಪಾ ? ಎಂದು ಪ್ರಶ್ನಿಸಿದರು.
PublicNext
06/08/2022 01:32 pm