ಅಥಣಿ: ಡಿಸೆಂಬರ್ 35ರಂದು ಬಸವೇಶ್ವರ ಏತ ನೀರಾವರಿಯ ಕಾಮಗಾರಿ ಮುಗಿಸಲು ಗಡುವು ಕೊಟ್ಟಿರುವುದಾಗಿ ಹೇಳುವ ಮೂಲಕ ಶಾಸಕ ಶ್ರೀಮಂತ ಪಾಟೀಲ ಎಡವಟ್ಟು ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಬೇವನೂರ ಗ್ರಾಮದಲ್ಲಿ ಗ್ರಾಮಸ್ಥರನ್ನ ಉದ್ದೇಶಿಸಿ ಮಾತನಾಡುತ್ತಾ, 'ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಡಿಸೆಂಬರ್ 35ಕ್ಕೆ ಪೂರ್ಣಗೊಳಿಸುತ್ತೇವೆ. ಇದು ನಿಶ್ಚಿತ' ಎಂದು ಹೇಳಿ ಗ್ರಾಮಸ್ಥರನ್ನು ಒಂದು ಕ್ಷಣ ಆಶ್ಚರ್ಯಚಕಿತಗೊಳಿಸಿದ್ದಾರೆ.
ಶಾಸಕರ ಭಾಷಣದ ಈ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಖತ್ ಟ್ರೋಲ್ ಆಗುತ್ತಿದೆ.
ವರದಿ: ಸಂತೋಷ ಬಡಕಂಬಿ.
PublicNext
05/08/2022 09:00 am