ದಾವಣಗೆರೆ: ಶಾಸಕ ಜಮೀರ್ ಅಹ್ಮದ್ ಮುಂದಿನ ಉಪ ಮುಖ್ಯಮಂತ್ರಿ.. ಅವರಿಗೆ ಜೈ ಜೈ..! ದಾವಣಗೆರೆ ತಾಜ್ ಪ್ಯಾಲೇಸ್‌ನಲ್ಲಿ ನಡೆದ ಅಲ್ಪ ಸಂಖ್ಯಾತರ ಪೂರ್ವಭಾವಿ ಸಭೆಯಲ್ಲಿ ಘೋಷಣೆ ಮೊಳಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಜಮೀರ್ ಅಹ್ಮದ್ ಪರ ಕಾಂಗ್ರೆಸ್ ಮುಖಂಡರು ಜೈಕಾರದ ಘೋಷಣೆಗಳನ್ನು ಕೂಗಿದ್ದಾರೆ.
ಮುಸ್ಲಿಂ ಮುಖಂಡರಿಂದ ಮುಂದಿನ ಉಪ ಮುಖ್ಯಮಂತ್ರಿ ಅಂತ ಘೋಷಣೆ ಹಾಕಿದ್ದು, ಮುಸ್ಲಿಂ ಸಮುದಾಯದ ದೊಡ್ಡ ನಾಯಕರು ನೀವು. ಮುಂದಿನ ಉಪ ಮುಖ್ಯಮಂತ್ರಿ ಆಗುವಂತೆ ವೇದಿಕೆ ಮೇಲೆ ಮುಸ್ಲಿಂ ಮುಖಂಡ ಒತ್ತಾಯಿಸಿದ್ದಾರೆ. ಮುಂದಿನ ಸಿಎಂ ಆಗಿ ಸಿದ್ದರಾಮಯ್ಯ ಆಗಬೇಕೆಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದ ಜಮೀರ್ ಅಹ್ಮದ್ ಹಾಗೂ ಡಿ. ಕೆ ಶಿವಕುಮಾರ್ ನಡುವೆ ಜಟಾಪಟಿಯೂ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಈ ಘೋಷಣೆ ಮೊಳಗಿರುವುದು ಕುತೂಹಲ ಕೆರಳಿಸಿದೆ.
PublicNext
27/07/2022 09:23 am