ಜಮ್ಮು: ಪಾಕಿಸ್ತಾನ ಅಕ್ರಮಿತ ಭಾರತದ ಅವಿಭಾಜ್ಯ ಅಂಗ. ಭಾರತ ವಿಶ್ವದ ಈಗ ಶಕ್ತಿ ಶಾಲಿಯಾಗಿ ಬೆಳೆದಿದೆ. ಭಾರತವನ್ನ ಕೆಣಕಿದರೆ ಅದೇ ದಾಟಿಯಲ್ಲಿಯೇ ಪ್ರತ್ಯುತ್ತರ ಕೊಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಆಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ.
ಜಮ್ಮುವಿನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಸಮಾರಂಭದಲ್ಲಿಯೇ ರಾಜನಾಥ್ ಸಿಂಗ್ ಮಾತನಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಭಾರತ ದೇಶ ಎಲ್ಲಾ ಸವಾಲ ಅನ್ನ ಎದುರಿಸಲು ಶಕ್ತಿಯುತವಾಗಿಯೇ ಇದೆ. ಅತ್ಯಾಧುನಿಕ ಶಸ್ತ್ರಾತ್ರಗಳನ್ನೂ ಹೊಂದಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೇ ಆಗಿದೆ ಎಂದು ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಭಾರತದ ಶಾರದ ಶಕ್ತಿ ಕೇಂದ್ರವು ಇನ್ನೊಂದು ರಾಷ್ಟ್ರದ ಗಡಿ ರೇಖೆಯಲ್ಲಿದೆ. ಇದು ಒಪ್ಪಲು ಸಾಧ್ಯವೆ ಎಂದು ರಾಜನಾಥ್ ಸಿಂಗ್ ಕೇಳಿದ್ದಾರೆ.
PublicNext
24/07/2022 10:39 pm