ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಮಹತ್ವದ ಘೋಷಣೆ ಮಾಡಿದ್ದು, ಪುತ್ರ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸೋದು ಖಚಿತವಾಗಿದೆ.
ಅಂಜಾನಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಬಿಎಸ್‌ವೈ, ಶಿಕಾರಿಪುರದಿಂದ ವಿಜೇಂದ್ರ ಸ್ಪರ್ಧಿಸುತ್ತಿದ್ದಾರೆ ಎಂದು ಘೋಷಣೆ ಮಾಡಿದರು. ನಾನು ಕ್ಷೇತ್ರ ಬಿಟ್ಟುಕೊಡ್ತಾಯಿರೋದ್ರಿಂದ ವಿಜೇಂದ್ರ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿದ್ದಾರೆ ಎಂದು ಬಿಎಸ್‌ವೈ ಹೇಳಿದರು.
ಮೈಸೂರು ಭಾಗದಲ್ಲಿ ವಿಜೇಂದ್ರ ಸ್ಪರ್ಧೆಗೆ ಒತ್ತಡ ಇದ್ದೇ ಇದೆ. ಆದರೆ, ಇಲ್ಲಿನ ಸ್ಥಾನ ತೆರವಾಗೋದ್ರಿಂದ ವಿಜೇಂದ್ರ ಇಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ಜನತೆ ನನಗಿಂತಲೂ ಹೆಚ್ಚಿನ ಅಂತರದಲ್ಲಿಯೇ ವಿಜಯೇಂದ್ರ ಅವರಿಗೆ ಗೆಲುವು ತಂದುಕೊಡಬೇಕು ಎಂದು ಬಿಎಸ್‌ವೈ ಜನರಲ್ಲಿ ಕೇಳಿಕೊಂಡ್ರು.
PublicNext
22/07/2022 03:12 pm