ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿರ್ಮಲಾ ಸೀತಾರಾಮನ್ ಅವ್ರೇ ನೀವು ಮುಖ್ಯ ಜ್ಯೋತಿಷಿಯನ್ನ ನೇಮಿಸಿ ಬಿಡಿ !

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸ್ವಂತ ಕೌಶಲ್ಯವನ್ನ ನಂಬ್ತಿಲ್ಲ. ಆರ್ಥಿಕ ಸಲಹೆಗಾರರನ್ನೂ ನಂಬುತ್ತಿಲ್ಲ. ಬದಲಾಗಿ ಆರ್ಥಿಕ ರಕ್ಷಣೆಗೆ ಗ್ರಹಗಳನ್ನ ಆಹ್ವಾನಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕಟುವಾಗಿಯೇ ಟೀಕಿಸಿದ್ದಾರೆ.

ಹೊಸ ಶಕ್ತಿಯುತ ಬಾಹ್ಯಾಕಾಶದ ದೂರದರ್ಶಕದಿಂದ ನಾಸಾ ಚಿತ್ರಗಳನ್ನ ತೆಗೆದಿದೆ. ಆ ಫೋಟೋಗಳನ್ನೆ ನಿರ್ಮಲಾ ಸೀತಾರಾಮನ್ ರೀ ಟ್ವೀಟ್ ಮಾಡಿದ್ದಾರೆ. ಅದಕ್ಕೇನೆ ಪಿ.ಚಿದಂಬರಂ ಈಗ ವಾಗ್ದಾಳಿ ನಡೆಸಿದ್ದಾರೆ.

"ತನ್ನ ಸ್ವಂತ ಕೌಶಲ್ಯ ಹಾಗೂ ಆರ್ಥಿಕ ಸಲಹೆಗಾರರ ಕೌಶಲ್ಯದ ಮೇಲೆ ನಿರ್ಮಲಾ ಸೀತಾರಾಮನ್ ಭರವಸೆ ಕಳೆದುಕೊಂಡಿದ್ದಾರೆ. ಆರ್ಥಿಕ ರಕ್ಷಣೆಗೆ ಗ್ರಹಗಳನ್ನೆ ಕರೆದಿದ್ದಾರೆ" ಎಂದು ಕೂಡ ಚಿದಂಬರಂ ವ್ಯಂಗ್ಯವಾಡಿದ್ದಾರೆ.

ವಿತ್ತ ಸಚಿವರು ಈಗ ಮುಖ್ಯ ಆರ್ಥಿಕ ಜ್ಯೋತಿಷಿಯನ್ನ ನೇಮಿಸಬೇಕು ಅಂತಲೂ ಚಿದಂಬರಂ ಸಲಹೆ ನೀಡಿದ್ದಾರೆ.

Edited By :
PublicNext

PublicNext

14/07/2022 01:30 pm

Cinque Terre

45.46 K

Cinque Terre

2

ಸಂಬಂಧಿತ ಸುದ್ದಿ