ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ಮೋದಿ, ಅಮಿತ್ ಶಾ ನಮ್ಮ ರಾಜ್ಯಕ್ಕೆ ಬರುತ್ತಲೇ ಇರ್ತಾರೆ: ರಾಮಲಿಂಗಾರೆಡ್ಡಿ

ಬೆಂಗಳೂರು: ನೋಡ್ತಾ ಇರಿ. ಇನ್ಮುಂದೆ ನಮ್ಮ ರಾಜ್ಯಕ್ಕೆ ಮೋದಿ ಅಮಿತ್ ಶಾ ಬರುತ್ತಲೇ ಇರುತ್ತಾರೆ. ಇಲ್ಲಿ ಬಂದು ಏನು ಮಾಡಬೇಕೋ ಅದನ್ನು ಮಾಡೋದಿಲ್ಲ. ಬದಲಾಗಿ ಮಾಡಬಾರದ್ದನ್ನು ಮಾಡುತ್ತಾರೆ. ಇವರು ರಾಜ್ಯಕ್ಕೆ ಬಂದು ಹೋದ ತಕ್ಷಣ ನಮಗೇನು ನಡುಕ ಆಗಿಲ್ಲ. ಏನೇ ಎಲೆಕ್ಷನ್ ಮೈಂಡ್ ಸೆಟ್ ಕ್ರಿಯೇಟ್ ಮಾಡಲಿ, ಮುಂದೆ ನಾವೇ ಅಧಿಕಾರಕ್ಕೆ ಬರೋದು. ಸ್ವತಂತ್ರವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿಯನ್ನ ಜನರು ಧೂಳಿಪಟದಂತೆ ಎಸೆಯುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೊದಲು ಅಗ್ನಿಪಥ್ ಯೋಜನೆಯನ್ನ ಕೈಬಿಡಬೇಕು. ಈ ಹಿಂದೆ ಇದ್ದ ಪದ್ಧತಿಯನ್ನೇ ಮುಂದುವರೆಸಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸುತ್ತೇವೆ. ಮೋದಿ ಕಣ್ಣೊರೆಸುವ ನಾಟಕವಾಡುತ್ತಿದ್ದಾರೆ. ಇವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಎಲ್ಲಿ ಯಾವ ಉದ್ಯೋಗ ಕೊಡುತ್ತಿದ್ದಾರೆ. ಯುವಕರಿಗೆ ಸುಳ್ಳು ಆಶ್ವಾಸನೆ ನೀಡಿ ಮೋಸ ಮಾಡುತ್ತಿದ್ದಾರೆ ಎಂಬುದಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Nagaraj Tulugeri
PublicNext

PublicNext

28/06/2022 07:25 am

Cinque Terre

56.64 K

Cinque Terre

12

ಸಂಬಂಧಿತ ಸುದ್ದಿ