ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಮಹಾ’ ಹೈಡ್ರಾಮಾಗೆ ಬಿಗ್ ಟ್ವಿಸ್ಟ್ : ರೆಬೆಲ್ ಶಾಸಕರಿಗೆ ಬಿಗ್ ರಿಲೀಫ್

ನವದೆಹಲಿ: ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ಏಕನಾಥ್ ಶಿಂಧೆ ನೇತೃತ್ವದ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇಂದು ಉಭಯ ಬಣಗಳ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ, ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಹಾಗೂ ಇತರರಿಗೆ ನೋಟಿಸ್ ನೀಡಿದೆ. 5 ದಿನಗಳ ಒಳಗೆ ಉತ್ತರಿಸುವಂತೆ ಕಾಲಾವಕಾಶ ನೀಡಿದೆ.

ಇನ್ನು ಮುಂದಿನ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿರುವ ಸುಪ್ರೀಂ ಕೋರ್ಟ್, ಶಾಸಕರ ಅನರ್ಹತೆ ನಿರ್ಧಾರಕ್ಕೆ ತಡೆ ನೀಡಿದೆ. ಈ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ತೀವ್ರ ಹಿನ್ನಡೆ ಉಂಟಾಗಿದೆ. ಶಿಂಧೆ ಬಣದ ಶಾಸಕರಿಗೆ ಭದ್ರತೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ನಮಗೆ ಡೆಪ್ಯುಟಿ ಸ್ಪೀಕರ್ ಕಾನೂನುಬಾಹಿರವಾಗಿ ಅನರ್ಹತೆಯ ನೋಟಿಸ್ ನೀಡಿದ್ದಾರೆಂದು ಆರೋಪಿಸಿ ಶಾಸಕರು ಕೋರ್ಟ್ ಮೆಟ್ಟಿಲೇರಿದ್ದರು.

Edited By : Nirmala Aralikatti
PublicNext

PublicNext

27/06/2022 03:46 pm

Cinque Terre

74.97 K

Cinque Terre

8

ಸಂಬಂಧಿತ ಸುದ್ದಿ