ಲಕ್ನೋ: ಸಮಾಜವಾದಿ ಪಕ್ಷದ ಭದ್ರ ಕೋಟಿಯಾಗಿರೋ ರಾಂಪುರ ಮತ್ತು ಅಜಂಗಢ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಗೆಲುವಿನ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಪ್ರಭಾವಶಾಲಿ ಗೆಲುವು ಕೇಂದ್ರ ಮತ್ತು ಯುಪಿಯ ಡಬಲ್ ಇಂಜಿನ್ ಸರ್ಕಾರದ ವ್ಯಾಪಕವಾದ ಬೆಂಬಲ ಮತ್ತು ಸ್ವೀಕಾರ ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಮ್ಮ ಪಕ್ಷದ ಕಾರ್ಯಕರ್ತರ ಪ್ರಯತ್ನವನ್ನ ನಾನು ಪ್ರಶಂಸಿಸುತ್ತೇನೆ. ಬೆಂಬಲ ನೀಡಿದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೂಡ ಮೋದಿ ಟ್ವಿಟರ್ ನಲ್ಲಿ ಬರೆದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಯೋಗಿ ಕೂಡ ಈ ಗೆಲುವನ್ನ ಪ್ರಶಂಸಿಸಿದ್ದಾರೆ.ಡಬಲ್ ಇಂಜಿನ್ ಕಲ್ಯಾಣ ನೀತಿಯಿಂದಲೇ ಈ ಗೆಲವು ಸಾಧ್ಯವಾಗಿದೆ ಅಂತಲೇ ಹೇಳಿಕೊಂಡಿದ್ದಾರೆ.
PublicNext
27/06/2022 07:05 am