ನವದೆಹಲಿ: ಮಹಾತ್ಮಾ ಗಾಂಧಿಜೀ ಅವರ ಮೊಮ್ಮಗ ರಾಷ್ಟ್ರಪತಿ ಆಗ್ತಾರಾ? ಸದ್ಯಕ್ಕಂತೂ ಗೊತ್ತಿಲ್ಲ. ಆದರೆ, ಪ್ರತಿಪಕ್ಷಗಳು ಗೋಪಾಲಕೃಷ್ಣ ಗಾಂಧಿ ಹೆಸರನ್ನ ಸೂಚಿಸಿವೆ ಅನ್ನೋದು ಈಗ ವರದಿ ಆಗಿದೆ.
ಗೋಪಾಲಕೃಷ್ಣ ಗಾಂಧಿ ಕೂಡ ಇದಕ್ಕೆ ರಿಯಾಕ್ಟ್ ಮಾಡಿದ್ದು,ಈ ಬಗ್ಗೆ ಯೋಚನೆ ಮಾಡಲು ಕಾಲಾವಕಾಶ ಕೊಡಿ ಅಂತಲೇ ವಿಪಕ್ಷಗಳನ್ನ ಕೇಳಿದ್ದಾರೆ ಅನ್ನೋ ಮಾಹಿತಿ ಕೂಡ ಹೊರ ಬಿದ್ದಿದೆ.
ರಾಷ್ಟ್ರಪತಿ ಚುನಾವಣೆ ಸಂಬಂಧಿಸಿದಂತೆ ವಿಪಕ್ಷಗಳು ಇಂದು ಮಹತ್ವದ ಸಭೆ ನಡೆಸಲಿವೆ.ಈ ಸಭೆಯಲ್ಲಿಯೇ ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನ ಪ್ರಸ್ತಾಪಿಸೋ ಸಾಧ್ಯತೆ ಹೆಚ್ಚಿದೆ.
ಗೋಪಾಲಕೃಷ್ಣ ಗಾಂಧಿ ಈ ಹಿಂದೆ 2017 ರಲ್ಲಿ ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಇವರು ವೆಂಕಯ್ಯ ನಾಯ್ಡು ವಿರುದ್ಧ ಸೋತು ಹೋದರು.
PublicNext
15/06/2022 12:08 pm