ತಿರುವನಂತಪುರ: ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸಿಪಿಐ (ಎಂ) ಪಕ್ಷದ ಘರ್ಷಣೆ ತೀವ್ರವಾಗಿಯೇ ಇದೆ. ಇವರ ಈ ಕಿತ್ತಾಟಕ್ಕೆ ಈಗ ಗಾಂಧಿಜೀ ಪುತ್ಥಳಿ ಬಲಿಯಾಗಿದೆ.
ಕಣ್ಣೂರು ಜಿಲ್ಲೆಯ ಪಯ್ಯನ್ನೂರ್ ನಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಇರೋ ಗಾಂಧಿಜೀ ಪುತ್ಥಳಿಯನ್ನ ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಸಿಪಿಐ (ಎಂ) ಕಾರ್ಯಕರ್ತರ ನಡುವಿನ ಘರ್ಷಣೆ ಬಳಿಕ, 30 ಕ್ಕೂ ಹೆಚ್ಚು ದುಷ್ಕರ್ಮಿಗಳ ಗುಂಪು ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆಂದು ಹೇಳಲಾಗುತ್ತಿದೆ.
PublicNext
14/06/2022 02:48 pm