ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಬೈಯೋ ಭರದಲ್ಲಿ ಸುರ್ಜೇವಾಲ ಮಹಾ ಎಡವಟ್ಟು!

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನ ಬೈಯಲು ಹೋಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಾಲಿಗೆ ಹರಿಬಿಟ್ಟಿದ್ದು,ದ್ರೌಪದಿ ವಸ್ತ್ರಾಪಹರಣ ಅಂತ ಹೇಳೋ ಬದಲು, ಸೀತಾ ವಸ್ತ್ರಾಪಹರಣ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

ನಾಳೆ ರಾಜ್ಯ ಸಭಾ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿಯೇ ರಣದೀಪ್ ಸುರ್ಜೇವಾಲ ಪತ್ರಿಕಾಗೋಷ್ಠಿ ನಡೆಸಿದ್ದು, ನರೇಂದ್ರ ಮೋದಿ ಅವರ ಕಪಿಮುಷ್ಠಿಯಲ್ಲಿ ಸರ್ಕಾರಿ ಅಧಿಕಾರಿಗಳಿದ್ದಾರೆ.ಆದರೂ ಕಾಂಗ್ರೆಸ್ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದು ಸುರ್ಜೇವಾಲ ಹೇಳಿದ್ದಾರೆ.

ಬಿಜೆಪಿ ಹಣ ಮತ್ತು ಅಧಿಕಾರ ಬಳಸಿಕೊಂಡು ಗೆಲ್ಲಲು ಪ್ರಯತ್ನಿಸುತ್ತಿದೆ. ಚುನಾವಣೆ ಆಯೋಗ,ಸಿಬಿಐ,ಪೊಲೀಸ್ ಇಲಾಖೆ ಎಲ್ಲವೂ ಬಿಜೆಪಿ ಆಮಿಷಕ್ಕೆ ಬಲಿಯಾಗಿದೆ. ಅಂದು ಸೀತಾ ವಸ್ತ್ರಾಪಹರಣ ಮಾಡಿದಂತೆ ಇಂದು ಪ್ರಜಾಪ್ರಭುತ್ವದ ವಸ್ತ್ರಾಪಹರಣ ಮಾಡುತ್ತಿದ್ದಾರೆ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

Edited By :
PublicNext

PublicNext

09/06/2022 05:23 pm

Cinque Terre

41.57 K

Cinque Terre

9

ಸಂಬಂಧಿತ ಸುದ್ದಿ