ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದರಾಮಯ್ಯ ಎಲ್ಲಿ ಹೋಗ್ತಾನೋ ಅಲ್ಲಿ ಎಲ್ಲರನ್ನೂ ಮುಗಿಸ್ತಾನೆ !

ಕೊಪ್ಪಳ: ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಸಿದ್ದರಾಮಯ್ಯ ಅವರ ಮಾತುಗಳನ್ನ ಕೇಳೋದೇ ಇಲ್ಲ.ಆದರೂ ಸತ್ಯಹರಿಶ್ಚದ್ರನ ಹಾಗೆ ಸಿದ್ದರಾಮಯ್ಯ ಮಾತನಾಡುತ್ತಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಏಕವಚನದಲ್ಲಿಯೇ ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಬಾದಾಮಿಯಲ್ಲಿ ಚಿಮ್ಮನಕಟ್ಟಿ ಹಾಗೂ ಎಸ್.ಆರ್.ಪಾಟೀಲ್‌ನನ್ನ ಮುಗಿಸಿದ್ದಾನೆ. ಸಿದ್ದರಾಮಯ್ಯ ಎಲ್ಲಿ ಹೋಗ್ತಾನೋ ಅಲ್ಲಿ ಎಲ್ಲರನ್ನೂ ಮುಗಿಸುತ್ತಾನೆ ಎಂದು ಶ್ರೀರಾಮುಲು ಕೆಂಡಾಮಂಡಲ ಆಗಿದ್ದಾರೆ.

ಈಗಾಗಲೇ ಕಾಂಗ್ರೆಸ್‌ ನಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪರಮೇಶ್ವರ್ ಅವರನ್ನ ಸಿದ್ದರಾಮಯ್ಯ ಮುಗಿಸಿದ್ದಾನೆ. ಈಗ ಡಿಕೆ ಶಿವಕುಮಾರನ್ನೂ ಮುಗಿಸುತ್ತಾನೆ ಸಿದ್ದರಾಮಯ್ಯ ಅಂತಲೇ ಶ್ರೀರಾಮುಲು ದೂರಿದ್ದಾರೆ.

Edited By :
PublicNext

PublicNext

09/06/2022 03:20 pm

Cinque Terre

30.6 K

Cinque Terre

6

ಸಂಬಂಧಿತ ಸುದ್ದಿ