ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೂಪುರ್ ಶರ್ಮಾ ಮನೆಗೆ ಪೊಲೀಸ್ ಬಿಗಿ ಭದ್ರತೆ !

ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಮನೆಗೆ ಈಗ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ್ದ ಹೇಳಿಕೆಯಿಂದಲೇ ಈಗ ನೂಪುರ್ ಶರ್ಮಾ ಅವರಿಗೆ ಜೀವ ಬೆದರಿಕೆ ಹೆಚ್ಚಾಗಿದೆ.

ಹೌದು.ನೂಪುರ್ ಶರ್ಮಾ ಟೀವಿ ಶೋ ಒಂದರಲ್ಲಿ ಕೊಟ್ಟ ಹೇಳಿಕೆಯಿಂದ ಮುಸ್ಲಿಂ ಸಮುದಾಯದಲ್ಲಿ ಸಂಚಲನವೇ ಹುಟ್ಟುಕೊಂಡಿದೆ. ದೇಶದಲ್ಲಷ್ಟೇ ಅಲ್ಲ ಪಾಕಿಸ್ತಾನ್ ಮತ್ತು ಕತಾರ್ ನಲ್ಲೂ ನೂಪುರ್ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿಯೇ ನೂಪುರ್ ಶರ್ಮಾ,ಟ್ವಿಟರ್ ನಲ್ಲಿ ಕ್ಷಮೆಯಾಚಿಸಿದ್ದಾರೆ. ಅದಕ್ಕೂ ಮೊದಲೇ, ಬಿಜೆಪಿ ಪಕ್ಷ ನೂಪುರ್ ಶರ್ಮಾರನ್ನ ಅಮಾನತ್ತುಗೊಳಿಸಿದೆ.

ಆದರೆ, ತಮಗೆ ಜೀವ ಬೆದರಿಕೆ ಬಂದಿದೆ ಎಂದು ನೂಪುರ್ ಶರ್ಮಾ,ದೂರು ದಾಖಲಿಸಿದ್ದರು. ಈ ಕಾರಣಕ್ಕೇನೆ ಪೊಲೀಸರು ಎಫ್.ಐ.ಆರ್.ದಾಖಲಿಸಿಕೊಂಡು ಭದ್ರತೆ ಒದಗಿಸಿದ್ದಾರೆ.

Edited By :
PublicNext

PublicNext

07/06/2022 04:11 pm

Cinque Terre

30.81 K

Cinque Terre

3

ಸಂಬಂಧಿತ ಸುದ್ದಿ