ನವದೆಹಲಿ: ಬಿಜೆಪಿಯ ವಕ್ತಾರೆ ನೂಪುರ್ ಶರ್ಮಾ ಟೀವಿ ಚರ್ಚೆಯಲ್ಲಿ ಇಸ್ಲಾಂ ಧರ್ಮ ಗುರು ಪ್ರವಾದಿ ಮೊಹಮ್ಮದರ ಬಗ್ಗೆ ಹೇಳಿಕೆ ನೀಡಿ ವಿವಾದಾತ್ಮಕ್ಕೆ ಇಡಾಗಿದ್ದರು.ಈಗ ನೂಪುರ್ ಶರ್ಮಾ, ತಮ್ಮ ಈ ಹೇಳಿಕೆಯನ್ನ ಬೇಷರತ್ತಾಗಿ ಹಿಂಪಡೆದಿರೋದಾಗಿ ಹೇಳಿದ್ದಾರೆ.
ನೂಪುರ್ ಶರ್ಮಾ ಹೇಳಿದ್ದ ಈ ಹೇಳಿಕೆ ಭಾರತದಲ್ಲಿ ಅಷ್ಟೇ ಅಲ್ಲ. ಪಾಕ್, ಕತಾರ್ ಸೇರಿದಂತೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದೆ.
ಪಕ್ಷದಿಂದಲೇ ಅಮಾನತ್ತುಗೊಂಡ ಬಳಿಕವೇ ನೂಪುರ್ ಶರ್ಮಾ, ಟ್ವಿಟ್ ಮೂಲಕ ಬೇಷರತ್ ಆಗಿಯೇ ತಮ್ಮ ಹೇಳಿಕೆಯನ್ನ ಹಿಂಪಡೆಯುವದಾಗಿಯೇ ತಿಳಿಸಿದ್ದಾರೆ. ಇತ್ತೀಚಿಗೆ ನಾನು ಭಾಗವಹಿಸಿದ್ದ ಟೀವಿ ಚರ್ಚೆಯಲ್ಲಿ ಶಿವನನ್ನ ಅವಮಾನಿಸಲಾಗುತ್ತಿತ್ತು. ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನ ಕಾರಂಜಿ ಅಂತಲೂ ತಿಳಿಸಲಾಗುತ್ತಿದೆ.
ದೆಹಲಿಯಲ್ಲಿ ರಸ್ತೆ ಬದಿಯಲ್ಲಿ ಹಾಕಲಾಗಿರೋ ಕಂಬಳಿಗೂ ಶಿವಲಿಂಗವನ್ನ ಹೋಲಿಸಲಾಗುತ್ತಿತ್ತು.ಈ ಹಿನ್ನೆಲೆಯಲ್ಲಿಯೇ ನಾನು ಕೆಲವೊಂದು ಮಾತುಗಳನ್ನ ಆಡಿದ್ದೇನೆ. ಇದರಿಂದ ಯಾರಿಗಾದರೂ ನೋವುಂಟು ಆಗಿದ್ದರೇ,ನಾನು ನನ್ನ ಹೇಳಿಕೆಯನ್ನ ಬೇಷರತ್ ಹಿಂಪಡೆಯುತ್ತೇನೆ ಎಂದು ನೂಪುರ್ ಶರ್ಮಾ ಹೇಳಿದ್ದಾರೆ.
PublicNext
06/06/2022 12:35 pm