ಕಾಂಗ್ರೆಸ್ ನಾಯಕ ಕನಕಪುರ ಬಂಡೆ ಡಿ.ಕೆ.ಶಿವಕುಮಾರ ತಮ್ಮ ಜನ್ಮದಿನದ ದಿನ ನಡೆದಂತಹ ಘಟನೆ ಮೂಲಕ ಬಿಜೆಪಿ ಟೀಕಾಪ್ರಹಾರಕ್ಕೆ ಗುರಿಯಾಗಿದ್ದಾರೆ.
ಮೊನ್ನೆ ಮೇ.15 ರಂದು ಡಿ.ಕೆ.ಶಿವಕುಮಾರ ಜನ್ಮದಿನ ಅಂದು ರಾಷ್ಟ್ರೀಯ ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ಮಧ್ಯೆ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ಕೇಕ್ ಜನ್ಮದಿನ ಆಚರಣೆ ವೇಳೆ ಡಿ.ಕೆ.ಶಿವಕುಮಾರ ಕೇಕ್ ತಿನ್ನಿಸುವಂತೆ ಪ್ರಿಯಾಂಕ್ ಗಾಂಧಿ ಕೈಗೆ ಸ್ಪೂನ್ ನೀಡಿದಾಗ ಸಹಜವಾಗಿ ಕೇಕ್ ತೆಗೆದುಕೊಂಡು ಪ್ರಿಯಾಂಕ್ ಗಾಂಧಿ ಕೇಕ್ ತಿನ್ನಿಸದೇ ಸಹಚರರ ಕೈಯಲ್ಲಿ ಸ್ಪೂನ್ ನೀಡಿ ಅವರು ಕೇಕ್ ತಿನ್ನಿಸಿದ್ದಾರೆ.
ಈ ದೃಶ್ಯಗಳು ಅಂದೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು, ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕರ್ನಾಟಕ ಟ್ವಿಟರ್ ಪೇಜ್ ಟೀಕಾ ಪ್ರಹಾರ ನಡೆಸಿ " ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರು ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ, ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿ.ಕೆ.ಶಿವಕುಮಾರಗೆ ಕೇಕ್ ತಿನಿಸುವಷ್ಟು ಸೌಜನ್ಯವಿಲ್ಲಾ. ಮತ್ತೋಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು? ಮಾನ್ಯ ಡಿ.ಕೆ.ಶಿವಕುಮಾರ ಅವರೇ ಅವರ ಕೈಗೆ ಬಂದ ತುತ್ತು ನಿಮ್ಮ ಬಾಯಿಗೆ ಬರುವುದಿಲ್ಲ, ಸತ್ಯವನ್ನು ಈಗಲಾದರೂ ಅರಿತುಕೊಳ್ಳಿ .
ಕಾಣದ ಕೈಗಳ ಮುಂದೆ ನಿಮ್ಮ ಅಧಿಕಾರ ಹೀಗೆ ಕಿತ್ತುಕೊಳ್ಳತ್ತಾರೆ ನಿಮ್ಮ ಧನ ಬಲ ಮಾತ್ರ ಬಳಸಿಕೊಳ್ಳುತ್ತಾರೆ ಅಧಿಕಾರದ ಸಮಯದಲ್ಲಿ ದೂರ ಇಡುತ್ತಾರೆ ಎಂದು ಸರಣಿ ಟ್ವಿಟ್ ಮಾಡದೆ.
PublicNext
17/05/2022 10:37 pm