ಮೈಸೂರು: ನಟಿ ರಮ್ಯಾ ಅಶಿಸ್ತು, ಉದ್ಧಟತನ ತೋರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು ಪಕ್ಷದ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ್ದು ಸರಿಯಲ್ಲ. ಈ ಬಗ್ಗೆ ನಟಿ ರಮ್ಯಾ ಅವರನ್ನ ಕರೆದು ವಿವರಣೆ ಕೇಳುತ್ತೇವೆ ಎಂದಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಪಕ್ಷದ ಚೌಕಟ್ಟಿನೊಳಗೆ ಕರೆದು ಬಗೆಹರಿಸಿಕೊಳ್ಳುತ್ತೇವೆ. ಮಹಮದ್ ನಲಪಾಡ್ ಆಗಲಿ, ನಾನಾಗಲಿ ಯಾರೆ ಪಕ್ಷದ ವಿರುದ್ದ ನಡೆದರೆ ಅದು ಅಶಿಸ್ತು. ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.
PublicNext
13/05/2022 11:07 pm