ಮೈಸೂರು: ರಾಜಕಾರಣದಲ್ಲಿ ಏನ್ ಬೇಕಾದರೂ ಸಾಧ್ಯ ಇದೆ. ಇಡೀ ದಿನ ಕಿತ್ತಾಡಿದವರು ಸಂಜೆ ಹೊತ್ತಿಗೆ ಆಪ್ತ ಗೆಳೆಯರೇ ಆಗಿ ಬಿಡ್ತಾರೆ. ಈಗ ಆಗಿರೋದೂ ಅದೇನೇ. ಎಚ್.ವಿಶ್ವನಾಥ್ ಹಾಗೂ ಸಾರಾ ಮಹೇಶ್ ಮನಸೋ ಇಚ್ಛೆ ಕಿತ್ತಾಡಿಕೊಂಡದ್ದು ಗೊತ್ತೇ ಇದೆ. ಆದರೆ, ಈಗ ಇವರು ಕುಚುಕು ದೋಸ್ತಿಗಳಾಗಿದ್ದಾರೆ.
ಹೌದು.ಎಚ್.ವಿಶ್ವನಾಥ್ ಅವರಿಗೆ ಈಗ 75 ವರ್ಷ. ಇವರ ಈ ಹುಟ್ಟುಹಬ್ಬದ ಆಚರಣೆಗೆ ಸಮಿತಿ ಕೂಡ ರಚನೆ ಅಗಿದೆ. ಅದಕ್ಕೆ ಅಧ್ಯಕ್ಷರು ಯಾರೂ ಗೊತ್ತೇ ? ಅದು ಬೇರೆ ಯಾರೋ ಅಲ್ಲ. ಸಾ.ರಾ.ಮಹೇಶ್ ಈ ಸಮಿತಿಯ ಅಧ್ಯಕ್ಷರೇ ಆಗಿದ್ದಾರೆ.
ಪರಸ್ಪರ ಕಿತ್ತಾಡಿಕೊಂಡು ಆಣೆ-ಪ್ರಮಾಣ ಅಂತಲೆಲ್ಲ ಇವರು ಕಿತ್ತಾಡಿಕೊಂಡಿದ್ದರು. ಆದರೆ, ಸಾರಾ ಮಹೇಶ್ ಈ ಬಗ್ಗೆ ಹೇಳೊದೇ ಬೇರೆ. ರಾಜಕೀಯ ಬೇರೆ. ಸ್ನೇಹ ಬೇರೆ. ರಾಜಕೀಯ ಅಂತ ಬಂದ್ರೆ, ಮತ್ತೆ ಕಿತ್ತಾಟ ಇರೋದೇ. ಈ ಸ್ನೇಹ ಪೂರ್ವಕವಾಗಿಯೇ ವಿಶ್ವನಾಥ್ ಅವರ ಜನ್ಮ ದಿನವನ್ನ ಸೆಲೆಬ್ರೇಟ್ ಮಾಡುತ್ತಿದ್ದೇವೆ ಅಂತಲೇ ಹೇಳಿಕೊಂಡಿದ್ದಾರೆ.
PublicNext
07/05/2022 12:40 pm