ಬೆಂಗಳೂರು: 2,500 ಕೋಟಿ ಕೊಟ್ರೆ ಸಿಎಂ ಸ್ಥಾನ ಕೋಡುತ್ತೇವೆಂದು ಬೇಡಿಕೆ ಇಟ್ಟಿದ್ದರು ಎಂದು ಹೇಳಿದ ಶಾಸಕ ಯತ್ನಾಳ ಹೇಳಿಕೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ ಸಮಿತಿ ಶಿಫಾರಸು ಮಾಡಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ ಮಾಡಲಾಗಿದೆ.
ಹಲವು ಬಾರಿ ಮುಜುಗರದ ಹೇಳಿಕೆ ನೀಡಿರುವ ಬಗ್ಗೆ ವರದಿ ನೀಡಲಾಗಿದೆ. ರಾಜ್ಯ ಶಿಸ್ತು ಸಮಿತಿ ಯತ್ನಾಳ್ ಸಂಪರ್ಕ ಮಾಡಲು ಪ್ರಯತ್ನಿಸಿದೆ. ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ಪಡೆಯಲು ಸಮಿತಿ ಯತ್ನಿಸಿದೆ. ಆದರೆ ಶಾಸಕರು ದೂರವಾಣಿ ಕರೆಯನ್ನು ಸ್ವೀಕರಿಸಿಲ್ಲ. ಇಂದು (ಮೇ 7) ಸಂಜೆ ವೇಳೆಗೆ ಕೇಂದ್ರ ಶಿಸ್ತು ಸಮಿತಿ ಕ್ರಮದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.
ಯತ್ನಾಳ್ ಮಾಡಿರುವುದು ಬಹಳ ದೊಡ್ಡ ಗಂಭೀರ ಆರೋಪ. 2,500 ಕೋಟಿ ರೂ. ಸಿಎಂ ಖುರ್ಚಿಗೆ ಕೇಳಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ನನ್ನ ನಲವತ್ತು ವರ್ಷ ಜೀವನದಲ್ಲಿ ಈ ರೀತಿ ಆರೋಪ ಕೇಳಿರಲಿಲ್ಲ. ಇದು ಅತಿ ದೊಡ್ಡ ಸ್ಫೋಟಕ ಸುದ್ದಿ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
PublicNext
07/05/2022 11:58 am