ಬರ್ಲಿನ್: ರಷ್ಯಾ ಹಾಗೂ ಉಕ್ರೇನ್ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ. ಇದರಿಂದ ಎಲ್ಲರೂ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಜತೆ ಜಂಟಿ ಪತ್ರಿಕಾ ಹೇಳಿಕೆ ನೀಡಿ ಪ್ರಧಾನಿ ಮೋದಿ, ಉಕ್ರೇನ್ ಬಿಕ್ಕಟ್ಟಿನ ಆರಂಭದಲ್ಲಿಯೇ ಭಾರತ ಯುದ್ಧವನ್ನ ನಿಲ್ಲಿಸುವಂತೆ ಹೇಳಿತ್ತು. ಮಾತುಕತೆಯೊಂದಿಗೆ ವಿವಾದಕ್ಕೆ ಪರಿಹಾರ ಹುಡುಕಬಹುದು ಅಂತಲೂ ಹೇಳಿತ್ತು.
ಯುದ್ಧದಿಂದ ಏನೂ ಆಗೋದಿಲ್ಲ. ಯುದ್ಧದಿಂದ ಎಲ್ಲರೂ ನಷ್ಟ ಅನುಭವಿಸುತ್ತಾರೆ. ಆದರೆ, ಯುದ್ಧದ ವಿಚಾರದಲ್ಲಿ ಭಾರತ ಶಾಂತಿ ಪ್ರಿಯ ದೇಶ ಅಂತಲೇ ಜರ್ಮಿನಿಯಲ್ಲಿ ಮೋದಿ ಹೇಳಿಕೆ ಕೊಟ್ಟಿದ್ದಾರೆ.
PublicNext
03/05/2022 08:04 am