ಬೆಂಗಳೂರು: ಹಿಂದಿ ಹೇರಿಕೆ ವಿಷಯ ಈಗ ಎಲ್ಲೆಡೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ನಾಯಕರು ಇದು ಹೇರಿಕೆ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಇದು ಹೇರಿಕೆ ಅಲ್ಲ. ಭಾಷೆಯ ಬಳಕೆ ಎನ್ನುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಟೀಕಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರೇ ಉರ್ದು ಭಾಷೆ ನಿಮ್ಮ ತವರೂರಾದ ಸಿದ್ದರಾಮನಹುಂಡಿಯಲ್ಲಿ ಜನಿಸಿದೆಯಾ? ಎಂದು ಪ್ರಶ್ನೆ ಮಾಡಿದೆ.
ಬೇಡಿಕೆ ಇಲ್ಲದಿದ್ದರೂ ನೀವು ಸಿಎಂ ಆಗಿದ್ದಾಗ ಕಲಬುರಗಿಯಲ್ಲಿ ಉರ್ದು ವಿಶ್ವವಿದ್ಯಾಲಯ ಸ್ಥಾಪನೆಗೆ ಹೊರಟಿದ್ದು ಯಾಕೆ? ಎಂದು ರಾಜ್ಯ ಬಿಜೆಪಿ ಪ್ರಶ್ನೆ ಮಾಡಿದೆ. ಜತೆಗೆ ಉರ್ದು ಕಲಿಯುವಂತೆ ಪೊಲೀಸರನ್ನು ಒತ್ತಾಯಿಸುವಾಗ ನಿಮ್ಮ ಕನ್ನಡ ಪ್ರೇಮ ಎಲ್ಲಿತ್ತು? ಎಂದು ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಿರುವ ರಾಜ್ಯ ಬಿಜೆಪಿ 'ಕನ್ನಡ ವಿರೋಧಿ ಸಿದ್ದರಾಮಯ್ಯ' ಎಂದು ಹ್ಯಾಷ್ ಟ್ಯಾಗ್ ಮಾಡಿದೆ.
PublicNext
30/04/2022 05:56 pm