ದೇಶಾದ್ಯಂತ ಇಂಧನದ ಬೆಲೆ ಗಗನಕ್ಕೇರುತ್ತಿರುವಂತೆಯೇ, ಕೇಂದ್ರವು ಎಲ್ಲಾ ಇಂಧನ ತೆರಿಗೆಗಳಲ್ಲಿ 68 ಪ್ರತಿಶತವನ್ನು ತೆಗೆದುಕೊಳ್ಳುತ್ತಿದ್ದರೂ, ಬೆಲೆ ಏರಿಕೆ ವಿಚಾರದಲ್ಲಿ ರಾಜ್ಯಗಳನ್ನು ಮೋದಿ ದೂಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ರಾಜ್ಯಗಳನ್ನು 'ದೂಷಿಸುವ' ಮೂಲಕ ತಮ್ಮ"ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಗಾ ಕಲ್ಲಿದ್ದಲು ಕೊರತೆ,ಆಮ್ಲಜನಕದ ಕೊರತೆ, ಇಂಧನದ ಬೆಲೆ ಏರಿಕೆಯ ಮಧ್ಯೆ ಮೋದಿ ರಾಜ್ಯಗಳ ಮೇಲೆ ಗೂಬೆ ಕೂರಿಸಿ ತಮ್ಮ ಜವಾಬ್ದಾರಿಯಿಂದ ಎಸ್ಕೇಪ್ ಆಗುತ್ತಿರುವುದು ಸರಿಯಲ್ಲ ಎಂಬರ್ಥದಲ್ಲಿ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
PublicNext
28/04/2022 12:29 pm