ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಲೋಫರ್‌ಗಳಿಂದಲೂ ಸಿ.ಡಿ ಸೃಷ್ಟಿ: ಗುಡುಗಿದ ಯತ್ನಾಳ್

ವಿಜಯಪುರ: ಕರ್ನಾಟಕದ ರಾಜಕೀಯವೇ ಕೆಟ್ಟು ಹೋಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಜಾತಿ ಆಧಾರಿತವಾಗಿ ಬಂದ ನಾಯಕರನ್ನೇ ಪಕ್ಷಗಳು ಮೆಚ್ಚಿಕೊಳ್ಳುತ್ತಿರುವುದು ದೊಡ್ಡ ದುರಂತ. ಈ‌ ನಡುವೆ ಬ್ಲಾಕ್ ಮೇಲ್ ಮಾಡುವವರು, ಸಿ.ಡಿ ಮಾಡುವವರು ಹೆಚ್ಚಾಗಿದ್ದಾರೆ. ಬಿಜೆಪಿ ಲೋಫರ್‌ಗಳಿಂದಲೂ ಸಿ.ಡಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ರಾಜ್ಯದಲ್ಲಿ ಆ ಕಡೆಯೂ, ಈ ಕಡೆಯೂ, ಸಿ.ಡಿ ಸೃಷ್ಟಿಸುವ ಎರಡು ಕಾರ್ಖಾನೆಗಳಿವೆ. ವೈಯಕ್ತಿಕ ಜೀವನ ಬಹಿರಂಗಗೊಳಿಸುವ ಕೆಲಸದಲ್ಲಿ ಕಾಂಗ್ರೆಸ್ ಅಷ್ಟೇ ಅಲ್ಲ. ಬಿಜೆಪಿಯ ಲೋಫರ್‌ಗಳೂ ಇದ್ದಾರೆ. ಬೆಂಗಳೂರಿನಲ್ಲಿ ಇದಕ್ಕಾಗಿಯೇ ಒಂದು ತಂಡ ಇದೆ ಎಂದರು.

ಸಿದ್ದರಾಮಯ್ಯ ಕೂಡ ಒಳ್ಳೆಯ ರಾಜಕಾರಣಿ. ಕರ್ನಾಟಕದಲ್ಲಿ ಸುಸಂಸ್ಕೃತ ರಾಜಕಾರಣ ಇದೆ. ಎಸ್.ಎಂ ಕೃಷ್ಣ, ಕೆ.ಎಸ್ ನಿಜಲಿಂಗಪ್ಪರಂತಹ ಒಳ್ಳೆಯ ರಾಜಕಾರಣಿಗಳೂ ಇದ್ದರು‌. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದಂತೆ ಸಿ.ಡಿ ಹಗರಣ ಹಾಗೂ ಗುತ್ತಿಗೆದಾರ ಆತ್ಮಹತ್ಯೆ ಹಿಂದೆ ಒಂದೇ ತಂಡವಿದೆ. ಮಹಾನಾಯಕರೊಬ್ಬರ ಕೈವಾಡ ಇದೆ. ಅವರ ಹೆಸರು ಬಹಿರಂಗವಾಗಬೇಕು ಎಂದು ಯತ್ನಾಳ್ ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

16/04/2022 10:42 am

Cinque Terre

87.25 K

Cinque Terre

86

ಸಂಬಂಧಿತ ಸುದ್ದಿ