ಬೆಳಗಾವಿ: ದೇಶದ ಅಲ್ಪಸಂಖ್ಯಾತರು, ಮಹಿಲೆಯರು, ಬಡವರು ನಿರ್ಗತಿಕರು ಹಾಗೂ ಹಿಂದುಳಿದವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿ ಆ ಮೂಲಕ ಬಹುಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದೊಂದು ದೊಡ್ಡ ಷಡ್ಯಂತ್ರ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮೀಸಲಾತಿ ರದ್ದುಪಡಿಸುವ ಯತ್ನ ನಡೆದಿದೆ. ಎತ್ತಿಕಟ್ಟುವುದು ಮನುಸ್ಮೃತಿಯ ಭಾಗವಾಗಿದೆ. ಬಿಜೆಪಿ, ಸಂಘ ಪರಿವಾರದ ನಾಯಕರ ಕೆಲಸ ಖಂಡನೀಯ. ದೇವಾಲಯದ ಕಟ್ಟಡದಲ್ಲಿ ಮಾತ್ರ ವ್ಯಾಪಾರ ಮಾಡಬಾರದು ಎಂದು ಇತ್ತು. ಆದರೇ ರಸ್ತೆಯಲ್ಲಿ ವ್ಯಾಪಾರ ಮಾಡಬಾರದು ಎಂದು ಹೇಳಿಲ್ಲ. ಜಾತಿ ಹೆಸರಿನಲ್ಲಿ ಇರೋ ಹೋಟೆಲ್, ಮಾರ್ಕೆಟ್ ಮುಚ್ಚಲಿ. 130 ಕೋಟಿ ಭಾರತೀಯರಿಗೆ ಸಮಾನವಾದ ಹಕ್ಕು ಇದೆ. ದೇಶದಲ್ಲಿ ಬೆಲೆ ಏರಿಕೆ ನಿರಂತರವಾಗಿ ಹೆಚ್ಚಾಗಿದೆ. ಇದನ್ನು ಮರೆಮಾಚಲು ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸಲಾಗುತ್ತಿದೆ. ಇವರು ರಣಹೇಡಿಗಳು, ಬ್ರಿಟಿಷ್ ಕಾಲದಲ್ಲಿಯೂ ರಣಹೇಡಿಗಳು. ಬ್ರಿಟಿಷರ ಜತಗೆ ಶಾಮೀಲಾಗಿದ್ದರು, ಬ್ರಿಟಿಷರು ಕೊಟ್ಟ ಪೆನ್ಶನ್ ತೆಗೆದುಕೊಂಡವರು. ನಾಗಪುರದ ವಿಷ ಜಂತುಗಳು ದೇಶದ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಿವೆ ಎಂದು ಬಿ.ಕೆ ಹರಿಪ್ರಸಾದ್ ಸಂಘ ಪರಿವಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
PublicNext
10/04/2022 04:40 pm