ದಾವಣಗೆರೆ: ಕಳೆದ 21 ದಿನಗಳ ಹಿಂದೆ ಕಳ್ಳತನವಾಗಿದ್ದ ನವಜಾತ ಶಿಶು ಇದೀಗ ನಗರದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದರೂ ಅಂತ್ಯ ಕಂಡಿಲ್ಲ.ಯಾಕೆಂದರೆ ಪೊಲೀಸರು ಶಿಶುವಿನ ಡಿಎನ್ಎ ಪರೀಕ್ಷೆ ನಂತರ ಪೋಷಕರ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ಬುರ್ಖಾಧಾರಿ ಮಹಿಳೆಯೊಬ್ಬರು ಬಿಟ್ಟು ಹೋದ ಮಗುವನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆಯ ಪೊಲೀಸರು ಮಗುವನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಮಗುವು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಗರದ ಪಾಲಿಕೆ ಸಮೀಪ ಇರುವ ಹರಿಹರಕ್ಕೆ ಹೋಗುವ ಬಸ್ ನಿಲ್ದಾಣದಲ್ಲಿ ಈ ಮಗು ಪತ್ತೆಯಾಗಿದೆ. ಈ ಹಿಂದೆ ಮಗು ಕಳೆದುಕೊಂಡಿದ್ದ ಪಾಲಕರು ಜಿಲ್ಲಾಸ್ಪತ್ರೆಗೆ ಧಾವಿಸಿ ನಮ್ಮದೇ ಮಗುವೆಂದು ಗುರುತಿಸಿದ್ದಾರೆ. ಒಂದು ಹಂತದಲ್ಲಿ ಪ್ರಕರಣ ಅಂತ್ಯ ಪಡೆದಿದ್ದರೂ ಸಹ ಪೊಲೀಸರು ಡಿಎನ್ಎ ಪರೀಕ್ಷೆ ನಂತರ ಮಗುವನ್ನು ಪೋಷಕರ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ.
ನಗರದ ಚಾಮರಾಜ ಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮಾ.16 ರಂದು ಸಂಜೆ 6.18ಕ್ಕೆ ಹರಪನಹಳ್ಳಿ ಪಟ್ಟಣದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಗಂಡು ಶಿಶುವಿನ ಜನನವಾಗಿತ್ತು. ಮಗುವಿಗೆ ಉಸಿರಾಟದ ತೊಂದರೆ ಆಗಿತ್ತು ಎಂದು ಮಕ್ಕಳ ತೀವ್ರ ನಿಗಾಘಟಕದಲ್ಲಿಇಡಲಾಗಿತ್ತು. ಎರಡು ಗಂಟೆಯ ಬಳಿಕ ಶಿಶು ನೀಡವಾಗ ತಾಯಿ ಕಾರ್ಡ್ ತರುವಂತೆ ತಿಳಿಸಲಾಗಿತ್ತು. ಅದರಂತೆ ಇಸ್ಮಾಯಿಲ್ ಅವರು ತಾಯಿ ಕಾರ್ಡ್ ತರಲುಹೋದಾಗ ಅಪರಿಚಿತ ಮಹಿಳೆಗೆ ಮಗು ನೀಡಲಾಗಿದ್ದು, ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿ ಕೈವಾಡ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
PublicNext
06/04/2022 12:31 pm