ಡೆಹ್ರಾಡೂನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಲೋಚನೆಗಳಿಂದ ಪ್ರಭಾವಿತಳಾದ ಉತ್ತರಾಖಂಡದ ಮಹಿಳೆ ತನ್ನ ಆಸ್ತಿಯನ್ನೇ ಬಿಟ್ಟುಕೊಟ್ಟಿದ್ದಾಳೆ.
ಹೌದು. ಡೆಹ್ರಾಡೂನ್‌ನ ನೆಹರು ಕಾಲೋನಿಯ ದಲನ್‌ವಾಲಾ ನಿವಾಸಿ ಪುಷ್ಪಾ ಮುಂಜಿಯಾಲ್ ಎಂಬುವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರನ್ನು ತಮ್ಮ ಆಸ್ತಿಯ ವಾರಸುದಾರರನ್ನಾಗಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಡೆಹ್ರಾಡೂನ್ ನ್ಯಾಯಾಲಯದಲ್ಲಿ ವಿಲ್ ಕೂಡ ಸಲ್ಲಿಸಿದ್ದಾರೆ.
ತನ್ನ ಆಸ್ತಿಯ ಸಂಪೂರ್ಣ ವಿವರವನ್ನು ನ್ಯಾಯಾಲಯದಲ್ಲಿ ನೀಡಿದ್ದೇನೆ. ನನ್ನ ಸಾವಿನ ನಂತರ ಸಂಪೂರ್ಣ ಆಸ್ತಿಯ ಮಾಲೀಕತ್ವವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸುವಂತೆ ನ್ಯಾಯಾಲಯಕ್ಕೆ ಪುಷ್ಪಾ ಮನವಿ ಮಾಡಿಕೊಂಡಿದ್ದಾರೆ.
ಪುಷ್ಪಾ ಅವರು 50 ಲಕ್ಷ ರೂ. ಸ್ಥಿರ ಠೇವಣಿ ಮತ್ತು 10 ಗ್ರಾಂ. ಚಿನ್ನವನ್ನು ಹೊಂದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ರಾಹುಲ್ ಗಾಂಧಿ ಅವರ ಕುಟುಂಬ ದೇಶಕ್ಕಾಗಿ ಅತ್ಯುನ್ನತ ತ್ಯಾಗ ಮಾಡಿದೆ ಎಂದು ಮಹಿಳೆ ಹೆಮ್ಮೆಪಟ್ಟಿದ್ದಾರೆ.
PublicNext
04/04/2022 06:49 pm